Mangalore: MRPL ಘಟಕದಲ್ಲಿ ಅನಿಲ ಸೋರಿಕೆ: ಇಬ್ಬರು ಕಾರ್ಮಿಕರು ಸಾವು, ಓರ್ವ ಅಸ್ವಸ್ಥ

Mangalore: ಎಂಆರ್‌ಪಿಎಲ್ ಘಟಕದಲ್ಲಿ ಹೈಡ್ರೋಜನ್ ಸಲ್ಫೈಡ್ ಅನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದು, ಓರ್ವ ಅಸ್ವಸ್ಥಗೊಂಡಿರುವ ಘಟನೆ ಶನಿವಾರ (ಜು.12) ನಡೆದಿದೆ.

ಪೆಟ್ರೋಲಿಯಂ ರಿಫೈನರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂಆರ್‌ಪಿಎಲ್‌ನ ತ್ಯಾಜ್ಯ ತೈಲ ಸಂಗ್ರಹಣ ಘಟಕದಲ್ಲಿ ಲೆವೆಲ್ ಬದಲಾವಣೆ ಪರಿಶೀಲನೆಗೆ ತೆರಳಿದ್ದ ಕಾರ್ಮಿಕ ವಾಪಸ್ ಬಾರದೇ ಇರುವುದನ್ನು ಕಂಡು ಇನ್ನಿಬ್ಬರು ತೆರಳಿದ್ದಾರೆ. ಈ ವೇಳೆ ಮೂವರು ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಓರ್ವನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ತ್ಯಾಜ್ಯ ತೈಲ ಸಂಗ್ರಹ ಟ್ಯಾಂಕ್‌ನಲ್ಲಿ ಹೈಡ್ರೋಜನ್ ಸಲ್ಪೈಡ್ ಅನಿಲ ಸೋರಿಕೆಯಿಂದ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ. ಕಾರ್ಮಿಕರಲ್ಲಿ ಒಬ್ಬರು ಕನ್ನಡಿಗರು, ಇಬ್ಬರು ಹೊರರಾಜ್ಯದವರೆಂದು ವರದಿಯಾಗಿದೆ.
Comments are closed.