Nelamangala: ಕೌಟುಂಬಿಕ ಸಮಸ್ಯೆ ಹೇಳಿಕೊಂಡ ಬಂದ ಮಹಿಳೆಯ ಮೇಲೆ ಮೌಲ್ವಿಯಿಂದ ಲೈಂಗಿಕ ಕಿರುಕುಳ

Share the Article

Nelamangala: ಕೌಟುಂಬಿಕ ಸಮಸ್ಯೆ ಪರಿಹರಿಸಲೆಂದು ಬಂದ ಮಹಿಳೆಯ ಮೇಲೆ ಮೌಲ್ವಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತುಮಕೂರು ಮೂಲದ ಮಹಿಳೆ ಮೌಲ್ವಿಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ಸೋಂಪುರ ಹೋಬಳಿಯ ಕೂತಘಟ್ಟ ಗ್ರಾಮದ ಭದ್ರೆ ಅಲಂ ಲೈಂಗಿಕ ದೌರ್ಜನ್ಯ ಮಾಡಿದ ಆರೋಪಿ.

ಈ ಘಟನೆ ಜೂನ್‌ 30 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆ ದಿನ ಸಂಜೆ 7 ಗಂಟೆ ಸುಮಾರಿಗೆ ಸಂತ್ರಸ್ತ ಮಹಿಳೆ ತನ್ನ ಪತಿಯ ಜೊತೆ ಕೂತಗಟ್ಟದಲ್ಲಿರುವ ಭದ್ರೆ ಅಲಂ ಯಂತ್ರಶಾಸ್ತ್ರ ಮಾಡುತ್ತಾರೆಂದು ತಿಳಿದು ಅಲ್ಲಿಗೆ ಬಂದಿದ್ದು, ಸಮಸ್ಯೆ ಹೇಳಿದ್ದಾರೆ. ಆಗ ಭದ್ರೆ ಅಲಂ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ.

ಮಹಿಳೆಯ ಖಾಸಗಿ ಅಂಗ ಮುಟ್ಟಿ ದೈಹಿಕ ಹಿಂಸೆ ಮಾಡಿದ್ದಾನೆ. ಜುಲೈ 9 ರಂದು ಈ ಘಟನೆ ಕುರಿತು ಡಾಬಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರನ್ನು ದಾಖಲು ಮಾಡಿದ್ದಾರೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: Chamarajanagara: ಹುಲಿಗಳ ಸಾವಿನ ಬಳಿಕ ಚಿರತೆ ಶವ ಪತ್ತೆ: ಪಕ್ಕದಲ್ಲಿಯೇ ನಾಯಿ, ಕರು ಶವ ಪತ್ತೆ

Comments are closed.