Chikkamagaluru: ಗಬ್ಬದ ಹಸು ಕಡಿದು ಮಾಂಸಕ್ಕಾಗಿ ಬಳಕೆ: ಅಸ್ಸಾಂ ಮೂಲದ ಕೂಲಿ ಕಾರ್ಮಿಕರ ಬಂಧನ

Share the Article

Chikkamagaluru: ಮೂಕ ಪ್ರಾಣಿ ಗೋವಿನ ಮೇಲೆ ಮತ್ತೆ ಕ್ರೌರ್ಯ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಎಸ್ಟೇಟ್‌ವೊಂದರಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಮಾಂಸಕ್ಕೆಂದು ಗಬ್ಬದ ಹಸುವನ್ನು ಕಡಿದು ಅಂಗಾಗಳನ್ನು ಮಣ್ಣಿನಲ್ಲಿ ಹೂಳಲು ಯತ್ನ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಸಂಬಂಧ ಆರು ಕೂಲಿ ಕಾರ್ಮಿಕರನ್ನು ಗುರುವಾರ ಬಂಧನ ಮಾಡಲಾಗಿದೆ.

ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್‌ ಎಸ್ಟೇಟ್‌ನಲ್ಲಿ ಈ ಘಟನೆ ನಡೆದಿದೆ.

ಅಜೀರ್‌ ಆಲೀ, ನಜ್ಮುಲ್‌ ಹಕ್‌, ಇಜಾಹುಲ್‌, ಮೋಜೆರ್‌ ಅಲಿ, ಮಂಜುಲ್‌ ಹಕ್‌ ಬಂಧಿತ ಅಸ್ಸಾಂ ಮೂಲದ ಕೂಲಿ ಕಾರ್ಮಿಕರು. ಇವರಿಂದ 45 ಕೆಜಿ ಹಸುವಿನ ಮಾಂಸವನ್ನು ವಶ ಪಡಿಸಿಕೊಳ್ಳಲಾಗಿದೆ.

ಈ ಘಟನೆ ಬುಧವಾರ ನಡೆದಿದೆ. ಹಸುವನ್ನು ಮಧ್ಯಾಹ್ನ ಹತ್ಯೆ ಮಾಡಿ ಮಾಂಸ ಮಾಡಿದ್ದು, ಮಾಂಸ ಬಾಳೆ ಎಲೆ ಮೇಲೆ ಇಟ್ಟಿರುವುದು ಕಂಡು ಬಂದಿದೆ. ಹಾಗೂ ಹಸುವಿನ ಅಂಗಾಂಗಗಳನ್ನು ಮಣ್ಣಿನ ಅಡಿ ಹಾಕಲು ಗುಂಡಿಯನ್ನು ತೋಡಲಾಗಿತ್ತು.

ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.