Afghanistan: 6ರ ಬಾಲಕಿಯ ಜೊತೆ 45 ವರ್ಷದವನ ಜೊತೆ ಮದುವೆ: ತಾಲಿಬಾನ್‌ ನೀಡಿದ ಸೂಚನೆ ಏನು?

Share the Article

Afghanistan: ಅಫ್ಘಾನಿಸ್ತಾನದ ಹೆಲ್ಮಂಡ್‌ ಪ್ರಾಂತ್ಯದಲ್ಲಿ 45 ವರ್ಷದ ವ್ಯಕ್ತಿಯೊಬ್ಬ ಆರು ವರ್ಷದ ಬಾಲಕಿ ಮದುವೆಯಾಗಿದ್ದಾನೆ. ಆದರೆ ಬಾಲಕಿಗೆ 9 ವರ್ಷ ಆಗುವವರೆಗೆ ಮದುವೆಯಾದವನ ಮನೆಗೆ ಕಳುಹಿಸದಂತೆ ತಾಲಿಬಾನ್‌ ಸೂಚನೆ ನೀಡಿರುವ ಘಟನೆ ನಡೆದಿದೆ.

ಪೋಷಕರು ಬಾಲಕಿಯನ್ನು ಹಣಕ್ಕಾಗಿ ಮಾರಾಟ ಮಾಡಿದ್ದು, ಇದನ್ನು ಗಮನಿಸಿದ ತಾಲಿಬಾನ್‌ ಸಂಘಟನೆ, ಬಾಲಕಿಯನ್ನು ಆ ವ್ಯಕ್ತಿ ಮನೆಗೆ ಕರೆದೊಯ್ಯುವುದನ್ನು ತಡೆದಿದೆ. ಬಾಲಕಿಯ ತಂದೆ ಮತ್ತು ಆಕೆಯನ್ನು ಮದುವೆಯಾದ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಈ ವ್ಯಕ್ತಿ ಈ ಮೊದಲೇ ಇಬ್ಬರು ಹೆಂಡತಿಯರನ್ನು ಹೊಂದಿದ್ದಾನೆ. ಬಾಲಕಿಯನ್ನು ಆತನಿಗೆ ಮಾರಾಟ ಮಾಡುವಂತೆ ಹಣ ಪಾವತಿ ಮಾಡಿದ್ದಾನೆ. ತಾಲಿಬಾನ್‌ ಬಾಲ್ಯ ವಿವಾಹ, ಮಹಿಳಾ ಶಿಕ್ಷಣ ಮತ್ತು ಉದ್ಯೋಗದ ಮೇಲೆ ತಾಲಿಬಾನ್‌ ಹೇರಿದ ನಿಷೇಧದ ಅಡಿಯಲ್ಲಿ ಹೆಚ್ಚು ತೀವ್ರವಾಗಿದೆ.

ಇದನ್ನೂ ಓದಿ: Mohan Bhagavat: ಮುಂದಿನ ವರ್ಷ ಪ್ರಧಾನಿ ಮೋದಿ ರಾಜಕೀಯ ನಿವೃತ್ತಿ? ಕುತೂಹಲ ಹುಟ್ಟಿಸಿದ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ!!

Comments are closed.