Home Crime Kolar: ಗಂಡನನ್ನು ಬಿಟ್ಟು ನಲ್ಲನ ಹಿಂದೆ ಹೋದ ಮಹಿಳೆ: ಗರ್ಭಿಣಿ ಮಾಡಿಸಿ ಯುವಕ ಪರಾರಿ

Kolar: ಗಂಡನನ್ನು ಬಿಟ್ಟು ನಲ್ಲನ ಹಿಂದೆ ಹೋದ ಮಹಿಳೆ: ಗರ್ಭಿಣಿ ಮಾಡಿಸಿ ಯುವಕ ಪರಾರಿ

Image Credit: Public Tv

Hindu neighbor gifts plot of land

Hindu neighbour gifts land to Muslim journalist

Kolar: ಪ್ರಿಯಕರನಿಗಾಗಿ ಗಂಡನನ್ನು ಬಿಟ್ಟು ಓಡಿ ಬಂದಿದ್ದ ಮಹಿಳೆಯನ್ನು ಗರ್ಭಿಣಿ ಮಾಡಿಸಿ ಇದೀಗ ಆತ ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮಹಿಳೆ ಇದೀಗ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಅಂಬೇಡ್ಕರ್‌ ಫೋಟೋ ಹಿಡಿದು ಯುವಕನ ಮನೆ ಮುಂದೆ ಪ್ರತಿಭಟನೆ ಮಾಡುತ್ತಿದ್ದಾಳೆ.

ಬೆಂಗಳೂರಿನಲ್ಲಿ ತನ್ನ ಸಂಸಾರದೊಂದಿಗೆ ಇದ್ದಾಗ ಗಂಡನ ಸ್ನೇಹಿತನ ಪರಿಚಯವಾಗಿದೆ. ನಂತರ ಇವರಿಬ್ಬರ ನಡುವೆ ಸಂಬಂಧ ಬೆಳೆದಿದ್ದು, ಹಾಗಾಗಿ ಗಂಡನನ್ನು ಬಿಟ್ಟು ನಲ್ಲನ ಜೊತೆ ಓಡಿ ಬಂದಿದ್ದಳು. ಇದೀಗ ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದು, ಮದುವೆಗೆ ನಿರಾಕರಣೆ ಮಾಡಿದ್ದಾನೆ ಎಂದು ಮಹಿಳೆ ಹೇಳಿರುವ ಕುರಿತು ವರದಿಯಾಗಿದೆ.

ಇದರಿಂದ ಮಹಿಳೆ ಕಂಗಾಲಾಗಿದ್ದು, ಏಕಾಂಗಿ ಪ್ರತಿಭಟನೆ ಮಾಡುತ್ತಿದ್ದಾಳೆ. ಶ್ರೀನಿವಾಸಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.