Home Crime Gopal Khemka Murder: ಗೋಪಾಲ್ ಖೇಮ್ಕಾ ಹತ್ಯೆ ಪ್ರಕರಣ: ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ ಆರೋಪಿ

Gopal Khemka Murder: ಗೋಪಾಲ್ ಖೇಮ್ಕಾ ಹತ್ಯೆ ಪ್ರಕರಣ: ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ ಆರೋಪಿ

Hindu neighbor gifts plot of land

Hindu neighbour gifts land to Muslim journalist

Gopal Khemka Murder: ಬಿಹಾರದ ಉದ್ಯಮಿ, ಬಿಜೆಪಿ ನಾಯಕ ಗೋಪಾಲ್‌ ಖೇಮ್ಕಾ ಗೋಪಾಲ್ ಖೇಮ್ಕಾ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ಜು.7 (ಸೋಮವಾರ) ಈ ಘಟನೆ ನಡೆದಿದೆ.

ಆರೋಪಿ ವಿಕಾಸ್‌ ಅಲಿಯಾಸ್‌ ರಾಜಾ ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ ಎನ್ನಲಾಗಿದೆ.

ಉದ್ಯಮಿಯನ್ನು ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ಉಮೇಶ್‌ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ವಿಕಾಸ್‌ ಅಲಿಯಾಸ್‌ ರಾಜಾ ಉದ್ಯಮಿ ಹತ್ಯೆಗೆ ಉಮೇಶ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದ ಎಂದು ಆರೋಪಿಸಲಾಗಿದೆ. ಈತ ಆರೋಪಿ ಉಮೇಶ್‌ ಜೊತೆ ಸಂಪರ್ಕದಲ್ಲಿದ್ದ ಎಂದು ವರದಿಯಾಗಿದೆ.

ಎಸ್‌ಐಟಿ ಮತ್ತು ಎಸ್‌ಟಿಎಫ್ ತಮಗೆ ದೊರಕಿದ ಮಾಹಿತಿಯ ಮೇರೆಗೆ ವಿಕಾಸ್‌ನನ್ನು ಬಂಧನ ಮಾಡಲು ಹೋಗಿದ್ದು, ಪ್ರತಿಯಾಗಿ ಆರೋಪಿ ವಿಕಾಸ್‌ ಪೊಲೀಸರನ್ನು ಕಂಡ ತಕ್ಷಣ ಗುಂಡು ಹಾರಿಸಿದ್ದಾನೆ. ನಂತರ ಪೊಲೀಸರು ಗುಂಡಿನ ದಾಳಿ ಮಾಡಿದ್ದು, ಈ ಸಂದರ್ಭದಲ್ಲಿ ಆತ ಮೃತಪಟ್ಟಿದ್ದಾನೆ.

ಜು.4 ರಂದು ಬಿಜೆಪಿಯ ನಾಯಕ, ಉದ್ಯಮಿ ಗೋಪಾಲ್‌ ಖೇಮ್ಕಾ ಅವರನ್ನು ಅವರ ಮನೆಯ ಬಳಿ ರಾತ್ರಿ 11.40 ರ ಸುಮಾರಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಹತ್ತಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದರು.