Mangaluru: ಮಂಗಳೂರಿನಲ್ಲಿ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿ ಅರೆಸ್ಟ್!

Mangaluru: ಮಂಗಳೂರಲ್ಲಿ (Mangaluru) ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಸಕಲೇಶಪುರ ನಿವಾಸಿ ಧ್ರುವ್ ಶೆಟ್ಟಿ (22) ಬಂಧಿತ ಆರೋಪಿ. ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸೆನ್ ಠಾಣೆಯ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ಕಾರ್ಯಾಚರಣೆಯ ಮುಂದುವರೆದ ಭಾಗವಾಗಿ ಐವರು ಆರೋಪಿಗಳಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪಿ ಧ್ರುವ್ ಶೆಟ್ಟಿಯನ್ನು ಮೈಸೂರಿನಲ್ಲಿ ನಿನ್ನೆ ಬಂಧಿಸಲಾಗಿದೆ.
Comments are closed.