Crime: ಪತಿಯಿಂದಲೇ ಮಹಿಳಾ ಪುರಸಭೆ ಕೌನ್ಸಿಲರ್’ನ ಹತ್ಯೆ!

Crime: ಪುರಸಭೆಯ ಮಹಿಳಾ ಕೌನ್ಸಿಲರ್ ಒಬ್ಬರನ್ನು ಅವರ ಪತಿಯೇ ಬರ್ಬರವಾಗಿ ಕೊಂದಿರುವ ಘಟನೆ ಚೆನ್ನೈನ ಪಶ್ಚಿಮ ಉಪನಗರದಲ್ಲಿರುವ ತಿರುನಿಂದ್ರವೂರ್’ನಲ್ಲಿ ನಡೆದಿದೆ.

ಮೃತ ಕೌನ್ಸಿಲರ್ ಎಸ್ ಗೋಮತಿ (38). ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ತಿರುನಿನ್ರವೂರಿನ ಪುರಸಭೆ ಚುನಾವಣೆಯಲ್ಲಿ ಗೆದ್ದಿದ್ದರು. ಇದೀಗ ವೈಯಕ್ತಿಕ ಕಾರಣಗಳಿಂದಾಗಿ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಗುರುವಾರ ರಾತ್ರಿ ತಿರುನಿಂದ್ರವೂರ್’ನಲ್ಲಿ ಪೆರಿಯಾರ್ ಕಾಲೋನಿಯಲ್ಲಿರುವ ,ಅವರ ಮನೆಯ ಬಳಿ ಆಕೆಯ ಪತಿ ಸ್ಟೀಫನ್ ರಾಜ್ ಹಲ್ಲೆ ನಡೆಸಿದ್ದ, ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು ಸಾವನ್ನಪ್ಪಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಅಲ್ಲಿಯೇ ಸ್ಟೀಪನ್ ರಾಜ್ ಪೊಲೀಸರ ಮುಂದೆ ಶರಣಾಗಿದ್ದಾರೆ.
ಇದನ್ನೂ ಓದಿ: Uppinangady: ಉಪ್ಪಿನಂಗಡಿ: ಲಾರಿ ಮತ್ತು ಬಸ್ ನಡುವೆ ಡಿಕ್ಕಿ!
Comments are closed.