Crime: ವೇಶ್ಯಾವಾಟಿಕೆ: ಸುರಂಗ ಮಾರ್ಗದ ಅಡಗುತಾಣದಲ್ಲಿ ಮಹಿಳೆಯರ ರಕ್ಷಣೆ!

Share the Article

Crime: ಹುಬ್ಬಳ್ಳಿ ಹೊಸೂರಿನ ಪಾರಿಜಾತ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಶುಕ್ರವಾರ ಪೊಲೀಸರು ಮೈಸೂರಿನ ಒಡನಾಡಿ ಸಂಸ್ಥೆ ಸಹಯೋಗದಲ್ಲಿ ದಾಳಿ ನಡೆಸಿ, ಐವರು ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದಾರೆ. ಹೋಟೆಲ್‌ ವ್ಯವಸ್ಥಾಪಕ, ಸಿಬ್ಬಂದಿ ಹಾಗೂ ಗ್ರಾಹಕ ಸೇರಿ ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

‘ನೆಲಮಹಡಿ ಮತ್ತು ಮೊದಲನೇ ಮಹಡಿ ಗ್ರಾಹಕರಿಗೆ ಮೀಸಲಿಟ್ಟಿದ್ದು, ಎರಡನೇ ಮಹಡಿಯಲ್ಲಿನ ಕೊಠಡಿಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ತಮಿಳುನಾಡಿನ ಆರೋಗ್ಯ ಇಲಾಖೆಯಿಂದ ವಿತರಿಸುವ ಸಾವಿರಾರು ಕಾಂಡೋಮ್‌ಗಳು ಕೊಠಡಿಯಲ್ಲಿ ಕಂಡುಬಂದಿವೆ.

ತಪ್ಪಿಸಿಕೊಳ್ಳಲು ಶೌಚಾಲಯದ ಒಳಗೆ ಸುರಂಗ ಮಾರ್ಗದ ಅಡಗುತಾಣ ಪತ್ತೆಯಾಗಿದೆ. ಶಾಲೆ, ಆಸ್ಪತ್ರೆ ಸಮೀಪವೇ ವೇಶ್ಯಾವಾಟಿಕೆ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ತಿಳಿಸಲಾಗಿದೆ. ಮಕ್ಕಳ ಹಕ್ಕು ಆಯೋಗದ ಜಿಲ್ಲಾ ಅಧಿಕಾರಿಗಳಿಗೂ ದೂರು ನೀಡಿದ್ದೇವೆ’ ಎಂದು ತಿಳಿಸಿದರು.

ವಿದ್ಯಾನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು, ತನಿಖೆ ನಡೆಸಲಾಗುವುದು’ ಎಂದು ಪೊಲೀಸ್‌ ಕಮಿಷನ‌ರ್ ಎನ್. ಶಶಿಕುಮಾ‌ರ್ ತಿಳಿಸಿದರು.

ಇದನ್ನೂ ಓದಿ: Madarasa Rape: ಮದರಸಾದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಗರ್ಭಪಾತಕ್ಕೆ ಒತ್ತಾಯಿಸಿದ ಧರ್ಮಗುರುವಿನ ಬಂಧನ

Comments are closed.