Health Tips: ಓ ಹೃದಯವೇ ನೀನು ಮಿಡಿಯೋದು ನಿಲ್ಲಿಸೋದು ಯಾಕೆ? ಹೃದಯ ಬ್ಲಾಕೇಜ್ ಆದ್ರೆ ಆಂಜಿಯೋಪ್ಲಾಸ್ಟಿ ಮಾಡಿದ್ರೆ ಆಗುತ್ತಾ?

Health Tips: ಭಾರತದಲ್ಲಿ ಹೆಚ್ಚಿನ ಸಾವುಗಳು ಅಧಿಕ ಕೊಲೆಸ್ಟ್ರಾಲ್‌ನಿಂದ ಹೃದಯಾಘಾತದಿಂದ ಸಂಭವಿಸುತ್ತವೆ ಎಂಬುದನ್ನು ನೆನಪಿಡಿ. ನಿಮ್ಮ ಮನೆಯಲ್ಲಿ ಹಾಗೂ ಸುತ್ತಮುತ್ತ ತೂಕ ಮತ್ತು ಕೊಲೆಸ್ಟ್ರಾಲ್ ಹೆಚ್ಚಿರುವ ಅನೇಕ ಜನರು ನಿಮಗೆ ತಿಳಿದಿರಬಹುದು. ಅಮೇರಿಕದ ಅನೇಕ ದೊಡ್ಡ ಕಂಪನಿಗಳು ಭಾರತದಲ್ಲಿ ಹೃದ್ರೋಗಿಗಳಿಗೆ ಕೋಟ್ಯಂತರ ರೂಪಾಯಿಗಳ ಔಷಧಗಳನ್ನು ಮಾರಾಟ ಮಾಡುತ್ತಿವೆ.

ಹೃದ್ರೋಗಿಗಳಿಗೆ ಸಾಮಾನ್ಯವಾಗಿ ವೈದ್ಯರು ಆಂಜಿಯೋಪ್ಲ್ಯಾಸ್ಟಿ ಮಾಡಲು ಹೇಳುತ್ತಾರೆ. ಈ ಕಾರ್ಯಾಚರಣೆಯಲ್ಲಿ, ವೈದ್ಯರು ಹೃದಯದ ರಕ್ತನಾಳದಲ್ಲಿ ಸ್ಟೆಂಟ್ ಎಂಬ ಸ್ಪ್ರಿಂಗ್ ಅನ್ನು ಸೇರಿಸುತ್ತಾರೆ. ಈ ಸ್ಟೆಂಟ್ ನ್ನು USನಲ್ಲಿ ತಯಾರಿಸಲಾಗುತ್ತದೆ ಮತ್ತು ಅದರ ಉತ್ಪಾದನಾ ವೆಚ್ಚ ಕೇವಲ $2 (ರೂ. 150-180). ಈ ಸ್ಟೆಂಟ್‌ಗಳನ್ನು ಭಾರತಕ್ಕೆ ತಂದು ಮೂರರಿಂದ ಐದು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ಲಕ್ಷಗಟ್ಟಲೆ ಕಮಿಷನ್ ಪಡೆಯುವುದರಿಂದ ವೈದ್ಯರು ಆಂಜಿಯೋಪ್ಲಾಸ್ಟಿ ಮಾಡಿಸಿಕೊಳ್ಳಲು ರೋಗಿಗಳನ್ನು ಒತ್ತಾಯಿಸುತ್ತಾರೆ. ಆಂಜಿಯೋಪ್ಲ್ಯಾಸ್ಟಿ ಆಪರೇಷನ್ನೇ ಕೊಲೆಸ್ಟ್ರಾಲ್, ಬಿಪಿ ಅಥವಾ ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿದೆ. ಇದು ಯಾರಿಗೂ ಎಂದಿಗೂ ಯಶಸ್ವಿಯಾಗುವುದಿಲ್ಲ. ಏಕೆಂದರೆ, ವೈದ್ಯರು ಹೃದಯದ ರಕ್ತನಾಳದಲ್ಲಿ ಹಾಕುವ ಸ್ಪ್ರಿಂಗ್ ಪೆನ್ನಿನ ಸ್ಪ್ರಿಂಗ್ ಇದ್ದಂತೆ. ಕೆಲವು ತಿಂಗಳುಗಳಲ್ಲಿ, ಈ ಸ್ಪ್ರಿಂಗ್ ನ ಎರಡೂ ಬದಿಗಳಲ್ಲಿ ಕೊಲೆಸ್ಟರಾಲ್ ಮತ್ತು ಕೊಬ್ಬು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ರಕ್ತನಾಳದಲ್ಲಿ ಇನ್ನಷ್ಟು ಅಡೆತಡೆಗಳು ಹೆಚ್ಚಾಗುತ್ತವೆ. ಇದರ ಬೆನ್ನಲ್ಲೇ ಮತ್ತೊಮ್ಮೆ ಹೃದಯಾಘಾತವಾಗುತ್ತದೆ.
ವೈದ್ಯರು ಮತ್ತೊಮ್ಮೆ ಆಂಜಿಯೋಪ್ಲಾಸ್ಟಿ ಮಾಡುವಂತೆ ಹೇಳುತ್ತಾರೆ. ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಾರೆ. ಅದೂ ಕೂಡ, ನಿಮ್ಮ ಆರೋಗ್ಯವನ್ನು ಇನ್ನಷ್ಟು ಅಪಾಯಕ್ಕೆ ತಳ್ಳಿ! ಏಕೆಂದರೆ, ಸ್ಟಂಟ್ ಅಳವಡಿಸುವುದರಿಂದ ಹೃದಯದ ರಕ್ತನಾಳಗಳಲ್ಲಿ ಇನ್ನಷ್ಟು ಅಡೆತಡೆಗಳು ಹೆಚ್ಚಾಗುತ್ತವೆ. ಈ ವಾಸ್ತವಾಂಶವು ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಟ್ಟಿದೆ. ಹೃದಯದ ರಕ್ತನಾಳಗಳ ಅವರೋಧವನ್ನು ನೈಸರ್ಗಿಕ ಹಾಗೂ ಅಪಾಯಕರವಲ್ಲದ ಉಪಾಯಗಳಿಂದ ಸಹಜವಾಗಿ ನಿವಾರಿಸಬಹುದು.
ಹೋಮಿಯೋಪತಿ ಚಿಕಿತ್ಸೆ ಮತ್ತು ಜೀವನಶೈಲಿಯಲ್ಲಿ ಕೆಲವು ಸರಳ ಮಾರ್ಪಾಡುಗಳನ್ನು ಮಾಡಿಕೊಳ್ಳುವುದರ ಮೂಲಕ ಹೃದಯದ ನಾಳಗಳ ಅವರೋಧವು ನೈಸರ್ಗಿಕವಾಗಿ ನಿವಾರಣೆಯಾಗುತ್ತದೆ. ಕೊಲೆಸ್ಟ್ರಾಲ್ ಸಾಮಾನ್ಯ ಮಟ್ಟಕ್ಕೆ ಇಳಿಯುತ್ತದೆ. ರಕ್ತದೊತ್ತಡ ಸಾಮಾನ್ಯಗೊಳ್ಳುತ್ತದೆ ಹಾಗೂ ಹೃದಯಾಘಾತದ ಸಂಭವಗಳು ಕಡಿಮೆಯಾಗುತ್ತವೆ. ಇಷ್ಟೆಲ್ಲ ಪ್ರಯೋಜನಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಪಡೆಯಬಹುದು.
ಹೃದಯದ ರಕ್ತನಾಳಗಳು ಅವರೋಧ (ಹಾರ್ಟ್ ಬ್ಲಾಕೇಜ್) ಇದೆ ಎಂದು ತಿಳಿದಾಗ ಜನ ಆತಂಕಗೊಂಡು ವೈದ್ಯರು ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳುತ್ತಾರೆ. ಆದರೆ, ಎರಡು ನಿಮಿಷ ಸಮಾಧಾನದಿಂದ ಯೋಚಿಸಿದರೆ ನೀವು ಮುಂದೆ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಿ ಅನೇಕ ಜೀವಗಳನ್ನು ಉಳಿಸಬಹುದು. ಹೆಚ್ಚಿನ ಜನರಿಗೆ ಈ ಹಾರ್ಟ್ ಬ್ಲಾಕೇಜ್ ಅನ್ನು ಪ್ರಾಕೃತಿಕ ಮಾರ್ಗಗಳಿಂದ ನಿವಾರಿಸಬಹುದೆಂಬ ಅರಿವೇ ಇಲ್ಲ. ಆದ್ದರಿಂದ, ಅವಸರದಲ್ಲಿ ಎಂಜಿಯೋಪ್ಲಾಸ್ಟಿ ಮಾಡಿಸಿ ಸ್ಟೆಂಟ್ ಅಳವಡಿಸಿಕೊಳ್ಳುತ್ತಾರೆ. ಇದೆ ಈ ರೋಗಿಗಳು ಮಾಡುವ ದೊಡ್ಡ ತಪ್ಪು. ಜೊತೆಗೆ ಲಕ್ಷಾಂತರ ರೂಪಾಯಿಗಳು ವ್ಯರ್ಥ ಖರ್ಚು.
ಈ ಸಂದೇಶವನ್ನು ಹೆಚ್ಚಿನ ಜನರೊಂದಿಗೆ ಹಂಚಿಕೊಳ್ಳುವುದರ ಮೂಲಕ ನೀವು ಅನೇಕರ ಪ್ರಾಣವನ್ನು ಉಳಿಸುವಲ್ಲಿ ನೆರವಾಗಬಹುದು. ಆದ್ದರಿಂದ, ಇದನ್ನು ಸಾಧ್ಯವಿದ್ದಷ್ಟು ಜನರಲ್ಲಿ ಹಂಚಿಕೊಳ್ಳಬೇಕೆಂದು ವಿನಂತಿ.
– ಡಾ. ಪ್ರ. ಅ. ಕುಲಕರ್ಣಿ
Comments are closed.