Heart Attack: ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣ – ಹೃದಯಾಘಾತಕ್ಕೆ ಕೋವಿಡ್ ಕಾರಣನಾ? ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ

Share the Article

Heart Attack: ರಾಜ್ಯದಲ್ಲಿ ದಿನೇ ದಿನೇ ಹೃದಯಾಘಾತಕ್ಕೆ ಯುವಕರು ಬಲಿಯಾಗುತ್ತಿದ್ದಾರೆ. ದರಲ್ಲು ಹಾಸನ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಿನಿಂದ ನಿರಂತರ ೨೪ ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹಾಗಿದ್ದರೆ ಈ ಆಘಾತಕ್ಕೆ ಕಾರಣ ಏನು? ಅದರಲ್ಲೂ ನವ ಯುವಕ ಯುವತಿಯರೇ ಇದಕ್ಕೆ ಬಲಿಯಾಗಲು ಕಾರಣ ಏನು? ಇದಕ್ಕೆ ಕೋವಿಡ್ ಲಸಿಕೆ ಕಾರಣವೇ ಅನ್ನೋದನ್ನು ಕಂಡು ಹಿಡಿಯಲು ಸರ್ಕಾರ ವೈದ್ಯರ ಸಮಿತಿಯನ್ನು ರಚಿಸಿದೆ.

ಕೋವಿಡ್ ಲಸಿಕೆ ದುಷ್ಪರಿಣಾಮ ಅಧ್ಯಯನಕ್ಕೆ ರಾಜ್ಯ ಸರ್ಕಾರ ಸಮಿತಿ ರಚಿಸಿದ್ದು, ಸಮಿತಿ ಶೀಘ್ರದಲ್ಲೆ ಕೋವಿಡ್ ಹೃದಯಾಘಾತ ವರದಿ ಸಲ್ಲಿಕೆ ಮಾಡಲಿದೆ. ನಾಲ್ಕು ದಿನಗಳಲ್ಲಿ ತಂಡ ಸರ್ಕಾರಕ್ಕೆ ಕೋವಿಡ್ ಹೃದಯಾಘಾತ ವರದಿ ಸಲ್ಲಿಸಲಿದೆ. ಜಯದೇವ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ನೇತೃತ್ವದ ಸಮಿತಿ ವರದಿ ನೀಡಲಿದ್ದು, ನಿಮ್ಹಾನ್ಸ್, ಸೇಂಟ್ ಜಾನ್ಸ್, ಮಣಿಪಾಲ್ ಆಸ್ಪತ್ರೆಗಳ ವೈದ್ಯರನ್ನೊಳಗೊಂಡ ಸಮಿತಿ ಈ ವರದಿಯನ್ನು ನೀಡಲಿದೆ?

ಹೃದಯಾಘಾತ ಸಂಬಂಧ ಅಧ್ಯಯನ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೆ ತಜ್ಞ ವೈದ್ಯರ ತಂಡದಿಂದ ಲಸಿಕೆ ಪಡೆದ 250 ಮಂದಿಯನ್ನು ಅಧ್ಯಯನ ಮಾಡಲಾಗಿದೆ. ಕೋವಿಡ್ ಲಸಿಕೆಯಿಂದಲೇ ಹೃದಯಾಘಾತ ಜಾಸ್ತಿ ಆಗ್ತಿದ್ಯಾ? ಅದಕ್ಕೂ ಇದಕ್ಕೂ ನಂಟಿದೆಯೇ? ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಪ್ರತೀ ಪ್ರಕರಣದಲ್ಲಿ ಸಮಿತಿ ವೈದ್ಯಕೀಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ನಾಲ್ಯೈದು ದಿನದಲ್ಲಿ ವರದ ಸರ್ಕಾರದ ಕೈ ಸೇರಲಿದೆ ಎಂದು ಸಮಿತಿ ಹೇಳಿದೆ.

ಸಮಿತಿಯ ವರದಿ ಬಂದ ಮೇಲಷ್ಟೇ ಈ ಹೃದಯಾಘಾತಕ್ಕೆ ಕಾರಣ ಏನು ಅನ್ನೋದನ್ನು ಕಂಡು ಹಿಡಿಯಬಹುದಷ್ಟೆ. ಒಂದು ವೇಳೆ ಕೋವಿಡ್ ಲಸಿಕೆಯೇ ಈ ಹೃದಯಾಘಾತಕ್ಕೆ ಕಾರನವಾದರೆ ಇದು ಅನೇಕ ಮಂದಿಯ ನಿದ್ದೆಗೆಡಿಸಲಿದೆ.

ಇದನ್ನೂ ಓದಿ: Chikka magaluru: ಸುರಕ್ಷತಾ ದೃಷ್ಟಿಯಿಂದ ಪ್ರವಾಸಿಗರಿಗೆ ಎತ್ತಿನ ಭುಜ ಚಾರಣಕ್ಕೆ ನಿರ್ಬಂಧ!

Comments are closed.