Crime: ಪ್ರವಾಸಕ್ಕೆಂದು ಪಹಲ್ಗಾಮ್ ಗೆ ಹೋಗಿದ್ದ 70 ವರ್ಷದ ವೃದ್ಧೆ ಮೇಲೆ ಅತ್ಯಾಚಾರ: ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್

Share the Article

Crime: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ೭೦ ವರ್ಷದ ಮಹಿಳಾ ಪ್ರವಾಸಿ ಮೇಲೆ ಅತ್ಯಾಚಾರ ನಡೆದಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ನೀಡುವುದಿಲ್ಲ ಎಂದು ಅನಂತನಾಗ್ ನ ನ್ಯಾಯಾಲಯ ತಿಳಿಸಿದೆ.

ಜಾಮೀನು ನಿರಾಕರಿಸಿದ ಕೋರ್ಟ್ ಈ ಘಟನೆಯು ಸಮಾಜದೊಳಗಿನ “ನೈತಿಕ ಅವನತಿ” ಮತ್ತು “ಅಸ್ವಸ್ಥ ಮನಸ್ಥಿತಿ”ಯ ಪ್ರತಿಬಿಂಬವಾಗಿದೆ ಎಂದು ಹೇಳಿದ್ದು, ಸಮಾಜದ ನೈತಿಕ ರಚನೆಯನ್ನು ಸಂರಕ್ಷಿಸದ ಹೊರತು ಕಾಶ್ಮೀರದ ನೈಸರ್ಗಿಕ ಸೌಂದರ್ಯವು ಪ್ರವಾಸಿ ತಾಣವಾಗಿ ತನ್ನ ಆಕರ್ಷಣೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ವರ್ಷದ ಏಪ್ರಿಲ್ 11 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಹೋಟೆಲ್‌ನಲ್ಲಿ ಮಹಾರಾಷ್ಟ್ರದ ಪ್ರವಾಸಿ ಮೇಲೆ ಅತ್ಯಾಚಾರ ನಡೆದಿತ್ತು. ಆರೋಪಿಯು ಮಹಿಳೆಯ ಹೋಟೆಲ್ ಕೋಣೆಗೆ ಬಲವಂತವಾಗಿ ನುಗ್ಗಿ, ಕಂಬಳಿಯಿಂದ ಬಾಯಿ ಮುಚ್ಚಿ, ಅತ್ಯಾಚಾರ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯಲ್ಲಿ ಮಹಿಳೆಗೆ ಗಂಭೀರ ಗಾಯಗಳಾಗಿವೆ.

ಮಹಿಳೆಯನ್ನು ‘ಅತ್ಯಂತ ಆಘಾತಕಾರಿಯಾಗಿ ನಡೆಸಿಕೊಳ್ಳಲಾಗಿದೆ’ ಎಂದು ನ್ಯಾಯಾಲಯವು ಗಮನಿಸಿತು ಮತ್ತು ಈ ಘಟನೆಯನ್ನು ಕೇವಲ ಕ್ರಿಮಿನಲ್ ಕೃತ್ಯವೆಂದು ಮಾತ್ರವಲ್ಲದೆ ನೈತಿಕ ಕುಸಿತದ ಪ್ರಕರಣ ಎಂದೂ ಖಂಡಿಸಿತು, ವಿಶೇಷವಾಗಿ ಸಂತ್ರಸ್ಥೆ ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೃದ್ಧ ಪ್ರವಾಸಿ ಎನ್ನುವುದನ್ನು ಕೋರ್ಟ್‌ ಗಮನಿಸಿದೆ.

ಇದನ್ನೂ ಓದಿ:Patna: ಏಕಾಏಕಿ ನೀರಿನ ಹರಿವು ಹೆಚ್ಚಳ, ಕೊಚ್ಚಿ ಹೋದ ಯುವತಿಯರು, ಸ್ಥಳೀಯರಿಂದ ರಕ್ಷಣೆ, ವಿಡಿಯೋ ವೈರಲ್

Comments are closed.