

Kerala: ಆಗ ತಾನೆ ಹುಟ್ಟಿದ ಮಗುವೊಂದನ್ನು ಲಿವ್ ಇನ್ ಜೋಡಿಯೊಂದು ಒಂದು ಹಾಕಿರುವ ದುರ್ಘಟನೆ ನಂತರ ಪಾಪಪ್ರಜ್ಞೆಯಿಂದ ಪೊಲೀಸರಿಗೆ ಶರಣಾಗಿರುವ ಘಟನೆ ಕೇರಳದ ತ್ರಿಶೂರ್ ನಲ್ಲಿ ನಡೆದಿದೆ.
ಆರೋಪಿಗಳನ್ನು ಭುವಿನ್ ಮತ್ತು ಅನಿಶಾ ಎಂದು ಗುರುತಿಸಲಾಗಿದ್ದು, ಈ ಜೋಡಿ ಫೇಸ್ಬುಕ್ನಲ್ಲಿ ಪರಿಚಯವಾಗಿ 2020 ರಿಂದ ರಿಲೇಶನ್ಶಿಪ್ ನಲ್ಲಿ ಇದ್ದರು. ವರದಿಗಳ ಪ್ರಕಾರ 2021 ರಲ್ಲಿ ಅನಿಶಾ ಮಗುವೊಂದಕ್ಕೆ ಜನ್ಮ ನೀಡಿದ್ದು ಅದು ಕರುಳ ಬಳ್ಳಿ ಸುತ್ತಿಕೊಂಡಿದ್ದರಿಂದ ಮೃತ ಪಟ್ಟಿತ್ತು. ಹಾಗೂ ಆಕೆ ಅದನ್ನು ಜಮೀನಿನಲ್ಲಿ ಹೂತು ಹಾಕಿದ್ದು, ತನ್ನ ಪ್ರೇಮಿಯ ಕೋರಿಕೆಗಾಗಿ ಅದರ ಅವಶ್ಯಕಗಳನ್ನು ಆತನಿಗೆ ನೀಡಿದ್ದಳು ಆತ ತನ್ನ ಪ್ರೇಮದ ಪ್ರತೀಕವಾಗಿ ಅದನ್ನು ಇಟ್ಟುಕೊಂಡಿರುತ್ತಾನೆ.
ಇದಾದ ನಂತರ 2024ರಲ್ಲಿ ಅನಿಶಾ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದು, ಮಗು ಅಳುತ್ತಿರುವಾಗ ನೆರೆಹೊರೆಯವರಿಗೆ ಕೇಳಿಸಬಾರದೆಂದು ಮಗುವಿನ ಬಾಯಿಯನ್ನು ಮುಚ್ಚಿ ಹಿಡಿದುದರಿಂದ ಮಗುವು ಉಸಿರು ಗಟ್ಟಿ ಸಾವನ್ನಪ್ಪಿದೆ. ಮನೆಗೆ ಬಂದ ಭುವಿನ್ ಬಳಿ ಈ ವಿಷಯ ಹೇಳಿದಾಗ ಆತ ಮತ್ತೆ ಆ ಮಗುವಿನ ಶವವನ್ನು ಜಮೀನಿನಲ್ಲಿ ಹೂತು ಹಾಕಿದ್ದಾರೆ.
ಇದೀಗ ಇಬ್ಬರಿಗು ಪಾಪ ಪ್ರಜ್ಞೆ ಕಾಡಿದ್ದು, ಆ ಎರಡು ಮಕ್ಕಳ ಅವಶೇಷವನ್ನು ಪೊಲೀಸರ ಬಳಿಗೆ ತೆಗೆದುಕೊಂಡು ಹೋಗಿ ವಿವರಗಳನ್ನು ತಿಳಿಸಿ ಶರಣಾಗಿದ್ದಾರೆ.













