Heart Attack: ಸಿಕ್ಸರ್ ಬಾರಿಸಿ ಕುಸಿದು ಬಿದ್ದ ಯುವ ಕ್ರಿಕೆಟಿಗ ಹೃದಯಾಘಾತದಿಂದ ಸಾವು: ವಿಡಿಯೋ ವೈರಲ್

Heart Attack: ಯುವಕನೋರ್ವ ಕ್ರಿಕೆಟ್ ಆಟವಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಂಜಾಬ್ನಲ್ಲಿ ಜೂನ್ 29 ರಂದು ಭಾನುವಾರ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಯುವಕ ಸಿಕ್ಸರ್ ಹೊಡೆದಿದ್ದಾನೆ. ನಂತರ ನಾನ್ಸ್ಟ್ರೈಕ್ ಆಟಗಾರನ ಬಳಿ ಹೋಗಿ ಕ್ರೀಸ್ನಲ್ಲೇ ಬಿದ್ದಿದ್ದಾನೆ.

ख़ौफ़नाक दृश्य।
पंजाब के फिरोजपुर में क्रिकेट खेलते वक़्त एक खिलाड़ी ने जैसे ही ज़बरदस्त छक्का मारा,
अचानक दिल का दौरा पड़ा और उसी मैदान पर दम तोड़ दिया।ज़िंदगी वाकई पल भर की मेहमान है… ️#Firozpur #HeartAttack #Cricketer pic.twitter.com/AsM3evT01T
— Ankit Rajput (@AnkitKu50823807) June 29, 2025
ಕುಸಿದು ಬಿದ್ದ ಆತನನ್ನು ಮೇಲೆತ್ತಲು ಎಲ್ಲರೂ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಹೃದಯಾಘಾತದಿಂದ ಯುವ ಕ್ರಿಕೆಟಿಗ ಸಾವಿಗೀಡಾಗಿದ್ದಾನೆ.
ಮೃತ ಯುವಕ ಹರ್ಜೀತ್ ಎಂದು ಗುರುತಿಸಲಾಗಿದೆ. ಉತ್ತಮ ಬ್ಯಾಟಿಂಗ್ ಮಾಡಿ 49 ರನ್ ಗಳಿಸಿದ್ದರು. ಆದರೆ ಅರ್ಧ ಶತಕ ಆಗುವ ಮೊದಲೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
Comments are closed.