Crime: ಗೋ ರಕ್ಷಣೆಗೆ ಹೋದ ಶ್ರೀರಾಮಸೇನೆ ಕಾರ್ಯಕರ್ತರನ್ನು ತೆಂಗಿನ ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಯುವಕರ ಗುಂಪು

Share the Article

Belagavi: ಶ್ರೀರಾಮಸೇನೆ ಕಾರ್ಯಕರ್ತರನ್ನು ತೆಂಗಿನ ಮರಕ್ಕೆ ಕಟ್ಟಿ ಯುವಕರ ಗುಂಪು ಥಳಿಸಿ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಅಕ್ರಮವಾಗಿ ಗೋವುಗಳ ಸಾಗಾಟ ಆರೋಪದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ವಾಹನವನ್ನು ತಡೆದಿದ್ದರು. ಗೋವುಗಳ ರಕ್ಷಣೆ ಮಾಡಿ ಇಂಗಳಿ ಗ್ರಾಮದ ಬಳಿಯ ಗೋಶಾಲೆಗೆ ಸ್ಥಳಾಂತರ ಮಾಡಿದ್ದರು ಇಂದು ಗೋಶಾಲೆಯಲ್ಲಿದ್ದ ಗೋವುಗಳನ್ನು ಅಪರಿಚಿತ ಯುವಕರ ಗುಂಪು ಬೇರೆಡೆ ಶಿಫ್ಟ್‌ ಮಾಡಲು ಯತ್ನ ಮಾಡುತ್ತಿರುವ ಮಾಹಿತಿಯನ್ನು ಆಧರಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ಸ್ಥಳಕ್ಕೆ ಹೋಗಿದ್ದಾರೆ.

ಗೋವುಗಳನ್ನು ವಾಹನದಲ್ಲಿ ತುಂಬಿಸಿರುವುದನ್ನು ಕಂಡು ಪ್ರಶ್ನೆ ಮಾಡಿದ್ದಾರೆ. ಆಗ ಯುವಕರ ಗುಂಪು ಶ್ರೀರಾಮಸೇನೆಯ ಐವರು ಕಾರ್ಯಕರ್ತರನ್ನು ತೆಂಗಿನ ಮರಕ್ಕೆ ಕಟ್ಟಿ ಹಾಕಿ ದೊಣ್ಣೆಯಿಂದ ಥಳಿಸಿದ್ದಾರೆ.

ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

Comments are closed.