

Subrahmanya: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೃದಯಾಘಾತವಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿ ಐನೆಕಿದು ಗ್ರಾಮದ ಕುಜುಂಬಾರು ನಿವಾಸಿ ಡೀಕಯ್ಯ ಉಪ್ಪಳಿಕೆ (55) ಎಂದು ಗುರುತಿಸಲಾಗಿದೆ.
ಜೂನ್ 28 ಶನಿವಾರ ಸಂಜೆ ಸುಬ್ರಮಣ್ಯ (Subrahmanya) ಬಸ್ ನಿಲ್ದಾಣದಲ್ಲಿದ್ದಾಗ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರ ಕರೆದೊಯ್ದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.













