ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾ|ಘಟಕದ ಸಭೆ

Share the Article

ಅಧ್ಯಕ್ಷ: ಶ್ರೀಧರ್ ರೈ ಕೋಡಂಬು, ಪ್ರ.ಕಾರ್ಯದರ್ಶಿ: ಆದಿತ್ಯ ಈಶ್ವರಮಂಗಲ

ಕೋಶಾಧಿಕಾರಿ: ಅಕ್ಷತಾ ರವಿಚಂದ್ರ, ಉಪಾಧ್ಯಕ್ಷ: ಶಿವಕುಮಾರ್ ಈಶ್ವರಮಂಗಲ,

ಜತೆಕಾರ್ಯದರ್ಶಿ: ಲೋಕಯ್ಯ ಗೌಡ ಸಂಪ್ಯಾಡಿ, ಸಂಘಟನಾ ಕಾರ್ಯದರ್ಶಿ: ಅಶ್ವತ್ಥ್ ಶೆಟ್ಟಿ

ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಸಭೆಯು ಜೂ.೨೬ರಂದು ಸುದ್ದಿ ಅರಿವು ಕೃಷಿ ಕೇಂದ್ರದಲ್ಲಿ ನಡೆಯಿತು.

ಸಂಘದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ ಮಾತನಾಡಿ ಸಂಘ ಸ್ಥಾಪನೆಗೊಂಡು ಹಲವು ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಾ ಇದೆ. ಇದು ಸಂಘದ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶೈಲಜಸುದೇಶ್ ಚಿಕ್ಕಪುತ್ತೂರು ಮಾತನಾಡಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿ ಸಂಘದ ಬೆಳವಣಿಗೆಗೆ ಸಹಕರಿಸುತ್ತಿರುವ ಎಲ್ಲಾ ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ್ ರೈ ಅನಿಕೂಟೇಲು, ಕೋಶಾಧಿಕಾರಿ ಕವಿತಾ ವಿಶ್ವನಾಥ್ ಕುಂಬ್ರ, ಸಂಘಟನಾ ಕಾರ್ಯದರ್ಶಿ ಗೊಪಾಲಕೃಷ್ಣ ಸಂತೋಷ್ ನಗರ, ಜತೆ ಕಾರ್ಯದರ್ಶಿ ದಿಲ್‌ಶಾನ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಧರ್ ರೈ ಕೋಡಂಬು, ಆದಿತ್ಯ ಎಡಪಡಿತ್ತಾಯ, ಶಿವಕುಮಾರ್ ಈಶ್ವರಮಂಗಲ, ಅಕ್ಷತಾ ರವಿಚಂದ್ರ, ಲೋಕಯ್ಯ ಗೌಡ ಸಂಪ್ಯಾಡಿ, ತಿಲಕ್ ರೈ ಕುತ್ಯಾಡಿ, ನರೇಶ್ ಜೈನ್, ಶರತ್ ಕುಮಾರ್ ಪಾರ, ಎನ್. ಮೋಹನ್ ಶೆಟ್ಟಿ, ಪ್ರಜ್ವಲ್ ಪುತ್ತೂರು, ತಾರನಾಥ್ ಹೊಸೊಳಿಕೆ, ರಾಕೇಶ್ ನಾಯಕ್, ಚಿತ್ರಾಂಗಿನಿ ಸತ್ಯಪ್ರಕಾಶ್, ನವ್ಯ, ಪ್ರೀತಾ, ಜಯಲಕ್ಷ್ಮೀ, ದಿನೇಶ್ ಬಡಗನ್ನೂರು, ರಕ್ಷಿತಾವರುಣ್ ಸಂಪ್ಯ, ರೇಶ್ಮಾ, ಸುಮಿತ್ರ, ಗಂಗಾಧರ ನಿಡ್ಪಳ್ಳಿ, ರಾಜೇಶ್ ಸಂಪ್ಯಾಡಿ, ಪ್ರಶಾಂತ್ ಮಿತ್ತಡ್ಕ, ಹಿಲರಿ ಡಿ’ಸೋಜ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ್ ರೈ ಅನಿಕೂಟೇಲು ಸ್ವಾಗತಿಸಿ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗ ವಂದಿಸಿದರು.

————————-

ಬಾಕ್ಸ್..

ನೂತನ ಪದಾಧಿಕಾರಿಗಳ ಆಯ್ಕೆ

೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡಸಲಾಯಿತು. ಅಧ್ಯಕ್ಷರಾಗಿ ಶ್ರೀಧರ್ ರೈ ಕೋಡಂಬು, ಪ್ರಧಾನ ಕಾರ್ಯದರ್ಶಿಯಾಗಿ ಆದಿತ್ಯ ಈಶ್ವರಮಂಗಲ, ಕೋಶಾಧಿಕಾರಿಯಾಗಿ ಅಕ್ಷತಾ ರವಿಚಂದ್ರ, ಉಪಾಧ್ಯಕ್ಷರಾಗಿ ಶಿವಕುಮಾರ್ ಈಶ್ವರಮಂಗಲ, ಜತೆಕಾರ್ಯದರ್ಶಿಯಾಗಿ ಲೋಕಯ್ಯ ಸಂಪ್ಯಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಅಶ್ವತ್ಥ್ ಶೆಟ್ಟಿರವರನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

—————————–

ಶ್ರೀಧರ್ ರೈ ಕೋಡಂಬು

ಆದಿತ್ಯ ಈಶ್ವರಮಂಗಲ

ಅಕ್ಷತಾ ರವಿಚಂದ್ರ

ಶಿವಕುಮಾರ್ ಈಶ್ವರಮಂಗಲ,

ಲೋಕಯ್ಯ ಗೌಡ ಸಂಪ್ಯಾಡಿ

ಅಶ್ವತ್ಥ್ ಶೆಟ್ಟಿ

ಇದನ್ನೂ ಓದಿ: Mangaluru: ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ನಿನ್ನೆ ಮತ್ತೆ ಹೊಡೆದಾಟ; ಬರ್ಕೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

Comments are closed.