Blood pressure: ರಕ್ತದೊತ್ತಡಕ್ಕೆ ಈ ಪಾನೀಯಗಳು ಉತ್ತಮ ಮನೆ ಮದ್ದು

Share the Article

Blood pressure: ಈಗಿನವರು ಕಾಯಿಲೆ ಚಿಕ್ಕದಾಗಿರಲಿ ದೊಡ್ಡದ್ದೇ ಆಗಿರಲಿ, ಆಸ್ಪತ್ರೆಗಳಿಗೆ ಓಡುತ್ತಾರೆ. ಆದರೆ ಇಂಗ್ಲಿಷ್ ಮೆಡಿಸಿನ್ ಗಳಿಗಿಂತಲೂ ಮನೆ ಮದ್ದುಗಳು ಒಂದು ಕೈ ಮೇಲೆ. ಹೌದು! ಇತ್ತೀಚೆಗೆ ಎಲ್ಲರನ್ನೂ ಕಾಡುತ್ತಿರುವ ರಕ್ತದ ಒತ್ತಡದ ಸಮಸ್ಯೆಗೆ ಕೆಲವೊಂದು ಪಾನೀಯಗಳನ್ನು ಸೇವಿಸಿದರೆ ಥಟ್ ಅಂತ ಪರಿಹಾರ ಸಿಗುತ್ತೆ. ಅವುಗಳು ಇಂತಿವೆ:

ದಾಸವಾಳ ಹೂವಿನ ದಳಗಳಿಂದ ತಯಾರು ಮಾಡುವಂತಹ ಪಾನೀಯ ರಕ್ತನಾಳಗಳನ್ನು ಸಡಿಲ ಗೊಳಿಸಲು ಸಹಾಯ ಮಾಡುವುದರ ಜೊತೆಗೆ ರಕ್ತದೊತ್ತಡವನ್ನು ಸರಿಯಾಗಿಸುತ್ತದೆ. ಇನ್ನು ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಇದು ಕೂಡ ರಕ್ತನಾಳಗಳನ್ನು ಸಡಿಲಗೊಳಿಸಿ, ಸಂಯುಕ್ತವಾದ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಯಿಸುತ್ತದೆ. ಹಾಗೂ ಇನ್ನು ದಾಳಿಂಬೆ ಜ್ಯೂಸ್ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದ್ದು ರಕ್ತದೊತ್ತಡವನ್ನು ಸರಿ ಮಾಡುತ್ತದೆ.

ಉಪ್ಪು ಹಾಕದೆ ಇರುವ ಟೊಮ್ಯಾಟೋ ಜ್ಯೂಸ್ ಪೊಟ್ಯಾಶಿಯಂ ಮತ್ತು ಪೋಷಕಾಂಶಗಳ ಉತ್ತಮ ಮೂಲ ಆಗಿದ್ದು, ಹೃದಯದ ಆರೋಗ್ಯವನ್ನು ಬೆಂಬಲಿಸಿ ರಕ್ತದೊತ್ತಡ ನಿರ್ವಹಿಸಲು ಸಹಾಯ ಮಾಡುತ್ತದೆ.

ಇನ್ನು ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅಂಶಗಳು ಕೆನೆರಹಿತ ಹಾಲಿನಲ್ಲಿ ಜಾಸ್ತಿ ಇದ್ದು, ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

ಇದನ್ನೂ ಓದಿ;CWI: ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರನ ಮೇಲೆ ಲೈಂಗಿಕ ಕಿರುಕುಳದ ಆರೋಪ

Comments are closed.