CWI: ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರನ ಮೇಲೆ ಲೈಂಗಿಕ ಕಿರುಕುಳದ ಆರೋಪ

CWI: ವೆಸ್ಟ್ ಇಂಡೀಸ್ ಕ್ರಿಕೆಟಿಗನೊಬ್ಬನ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿದ್ದು, ಆ ಆಟಗಾರನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

ಒಟ್ಟು 11 ಮಹಿಳೆಯರು ಲೈಂಗಿಕ ಕಿರುಕುಳದ ಕುರಿತಾಗಿ ಆರೋಪ ಮಾಡಿದ್ದು ಅದರಲ್ಲಿ ಒಬ್ಬಾಕೆ ಹದಿ ಹರಿಯದವಳು ಎಂದು ಗಯಾನಿಸ್ ಪತ್ರಿಕೆ ಕೈಟಿಯರ್ ಬರೆದುಕೊಂಡಿದೆ. ವರದಿಗಳ ಪ್ರಕಾರ ಈ ಒಂದು ಘಟನೆಯನ್ನು ಮುಚ್ಚಿಡಲು ಆಟಗಾರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಈ ಕುರಿತಾಗಿ ಅಲ್ಲಿನ ಟಿವಿ ಮಾಧ್ಯಮ ಒಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಅನ್ನು ಸಂಪರ್ಕ ಮಾಡಿದ್ದು, ಈ ಕುರಿತಾಗಿ ಪ್ರಶ್ನೆಗಳನ್ನು ಕೇಳಿರುತ್ತದೆ. ಹಾಗೂ ಇದಕ್ಕೆ ಉತ್ತರಿಸಿರುವ ಸಿ ಡಬ್ಲ್ಯೂ ಐ ಅಧ್ಯಕ್ಷ ಕಿಶೋರ್ ಶಾಲೋ ಕ್ರಿಕೆಟ್ ವೆಸ್ಟ್ ಇಂಡೀಸ್ ಗೆ ಯಾವುದೇ ಮಾಹಿತಿ ತಿಳಿದಿಲ್ಲ ಹಾಗಾಗಿ ಈ ಸಮಯದಲ್ಲಿ ಪ್ರತಿಕ್ರಿಸುವ ಸ್ಥಿತಿಯಲ್ಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ;Mysuru: 20ಕ್ಕೂ ಹೆಚ್ಚು ಮಕ್ಕಳಿಗೆ ಕಚ್ಚಿದ ಹುಚ್ಚು ನಾಯಿಗಳು: ಚುಚ್ಚುಮದ್ದಿಲ್ಲದೆ ಪೋಷಕರ ಪರದಾಟ
Comments are closed.