Telangana : ರೀಲ್ಸ್ ಹುಚ್ಚಿಗಾಗಿ ರೈಲ್ವೆ ಟ್ರ್ಯಾಕ್ ಮೇಲೆ ಕಾರು ಚಲಾಯಿಸಿ ಯುವತಿಯ ಹುಚ್ಚಾಟ – ತಡವಾದ ರೈಲು ಸಂಚಾರ

Telangana : ಯುವತಿ ಒಬ್ಬಳು ರಿಯಲ್ಸ್ ಗಾಗಿ ರೈಲ್ವೆ ಟ್ರ್ಯಾಕ್ ಮೇಲೆ ಕಾರು ಚಲಾಯಿಸಿ ಹುಚ್ಚಾಟ ಮೆರೆದಿದ್ದಾಳೆ. ಯುವತಿ ಮಾಡಿದ ಎಡವಟ್ಟಿನಿಂದಾಗಿ ರೈಲು 45 ನಿಮಿಷಿಗಳ ಕಾಲ ವಿಳಂಬವಾಗಿದೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಾಗುಲಪಲ್ಲಿ-ಶಂಕರಪಲ್ಲಿ ಮಾರ್ಗದಲ್ಲಿ ನಡೆದಿದೆ. ಯುವತಿಯೊಬ್ಬಳು ಹಳಿಗಳ ಮೇಲೆ ಕಾರು ಚಲಾಯಿಸುವುದನ್ನು ರೈಲ್ವೆ ಸಿಬ್ಬಂದಿ ಗಮನಿಸಿದಾಗ ತಡೆಯಲು ಪ್ರಯತ್ನಿಸಿದರು. ಆದರೆ, ಕಾರು ನಿಲ್ಲಿಸದೆ ಯುವತಿ ಅಲ್ಲಿಂದ ಹೊರಟುಹೋದಳು. ಬಳಿಕ ನಾಗುಲಪಲ್ಲಿಯಲ್ಲಿ ಸ್ಥಳೀಯರು ಗಮನಿಸಿ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಯುವತಿಯು ಈ ವೇಳೆ ಚಾಕು ತೋರಿಸಿ ಬೆದರಿಸಿದ್ದಾಳೆ.
ಇನ್ನು ಅದೇ ಮಾರ್ಗದಲ್ಲಿ ಬರುತ್ತಿದ್ದ ರೈಲಿನ ಲೋಕೋ ಪೈಲಟ್ ಕಾರನ್ನು ಗಮನಿಸಿ ರೈಲನ್ನು ನಿಲ್ಲಿಸಿದರು. ನಂತರ, ಸ್ಥಳೀಯರು ಯುವತಿಯನ್ನು ಬಹಳ ಕಷ್ಟಪಟ್ಟು ಕಾರಿನಿಂದ ಹೊರಗೆಳೆದರು. ಈ ವೇಳೆ ಸ್ಥಳದಲ್ಲಿ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಯುವತಿಯನ್ನು ವಶಕ್ಕೆ ಪಡೆದರು. ಬಾಲಕಿಯ ದುರ್ವರ್ತನೆಯಿಂದಾಗಿ ಹಲವಾರು ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ತಿಳಿದು ಬಂದಿದೆ.
Comments are closed.