Supreme Court : ‘ಅಪರೇಷನ್ ಸಿಂಧೂರ್ನಲ್ಲಿ ಭಾಗವಹಿಸಿದ್ದೇನೆ ಶಿಕ್ಷೆ ಕೊಡ್ಬೇಡಿ’ ಹೆಂಡತಿಯನ್ನು ಕೊಂದ ಕಮಾಂಡೋನಿಂದ ಕೋರ್ಟ್ಗೆ ಅರ್ಜಿ!!

Supreme Court : ಪತ್ನಿಯನ್ನು ಕೊಂದ ಬ್ಲಾಕ್ ಕಮಾಂಡೋ ಒಬ್ಬರು ತಾನು ಆಪರೇಷನ್ ಸಿಂಧೂರಿನಲ್ಲಿ ಪಾಲ್ಗೊಂಡಿದ್ದೇನೆ ಹಾಗಾಗಿ ನನಗೆ ಶಿಕ್ಷೆಯಿಂದ ವಿನಾಯಿತಿ ನೀಡಿ ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿರುವಂತಹ ಘಟನೆ ನಡೆದಿದೆ. ಈ ಬೆನ್ನಲ್ಲೇ ಇವರ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದೆ.

ಹೌದು, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗಿಯಾದ ಮಾತ್ರಕ್ಕೆ ಪತ್ನಿಯ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ ವಿನಾಯ್ತಿ ಕೊಡಲು ಸಾಧ್ಯವಿಲ್ಲ ಎಂದು ಪತ್ನಿಯ ಕೊಲೆ ಆರೋಪಿಯಾಗಿರುವ ಬ್ಲ್ಯಾಕ್ ಕಮಾಂಡೋಗೆ (Black Cat Commando) ರಿಲೀಫ್ ಕೊಡಲು ಸುಪ್ರೀಂಕೋರ್ಟ್ (Supreme Court) ತಿರಸ್ಕರಿಸಿದೆ. ಅಲ್ಲದೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304B (ವರದಕ್ಷಿಣೆ ಸಾವು) ಅಡಿಯಲ್ಲಿ ಶಿಕ್ಷೆಗೊಳಗಾದ ಸೇನಾ ಕಮಾಂಡೋ ಒಬ್ಬರು ಎರಡು ವಾರಗಳಲ್ಲಿ ಅಧಿಕಾರಿಗಳ ಮುಂದೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ವಿನಾಯಿತಿ ಅಸಾಧ್ಯ ಎಂದು ನ್ಯಾಯಾಲಯ ಹೇಳಿದ ನಂತರ ಸಹ ಅರ್ಜಿದಾರರ ಪರ ವಕೀಲರು ಬಹಳ ಪ್ರಯತ್ನ ಮಾಡಿದ್ದಾರೆ. ಆದರೆ ಅವರು ವಾದವು ನ್ಯಾಯಪೀಠದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅದರ ಬದಲು ಮನೆಯಲ್ಲಿ ದೌರ್ಜನ್ಯ ಎಸಗುವುದರಿಂದ ನಿಮಗೆ ವಿನಾಯಿತಿ ನೀಡುವುದಿಲ್ಲ. ನೀವು ದೈಹಿಕವಾಗಿ ಎಷ್ಟು ಸದೃಢರಾಗಿದ್ದೀರಿ ಮತ್ತು ನೀವು ನಿಮ್ಮ ಹೆಂಡತಿಯನ್ನು ಕತ್ತು ಹಿಸುಕಿ ಕೊಂದಿದ್ದೀರಿ. ಹಾಗಾಗಿ ಯಾವುದೇ ಕಾರಣಕ್ಕೂ ವಿನಾಯಿತಿ ಕೊಡಲ್ಲ ಎಂದಿದ್ದಾರೆ.
ಇದನ್ನೂ ಓದಿ:Karawara: ವಾಹನದ ಮೇಲೆ ಮುರಿದು ಬಿದ್ದ ವಿದ್ಯುತ್ ಕಂಬ; ಕಾರ್ಮಿಕರು ಪವಾಡಸದೃಶ ಪಾರು
Comments are closed.