Intresting : ಗಂಡು ಮಗು ಆಗಲು ಸೊಸೆಗೆ ಮಾತ್ರೆ ಕೊಡಿ ಎಂದ ಅತ್ತೆ – ತಕ್ಷಣ ಡಾಕ್ಟರ್ ಮಾಡಿದ್ದೇನು ಗೊತ್ತಾ?

Intresting : ಕಾಲ ಬದಲಾದರೂ ಕೂಡ ಇಂದು ಹೆಣ್ಣು ಮಗು ಆಯಿತು ಎಂದರೆ ಮೂಗುಮುರಿಯವರೆ ಹೆಚ್ಚು. ಏನೇ ಆದರೂ ಕೂಡ ಗಂಡು ಮಗು ಬೇಕೆ ಎಂದು ಹಲವರು ಪಟ್ಟು ಹರಿಯುತ್ತಾರೆ. ಸೊಸೆಗೆ ಗಂಡು (male) ಮಗು ಆಗಿಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ಮನೆಯಿಂದ ಹೊರ ದಬ್ಬಿದ ಸಾಕಷ್ಟು ಪ್ರಕರಣ ನಮ್ಮ ಕಣ್ಮುಂದಿದೆ. ಈಗ ಡಾಕ್ಟರ್ ಬಳಿ ಬಂದ ಮಹಿಳೆಯೊಬ್ಬಳು ಗಂಡು ಮಗು ಆಗುವಂತೆ ತನ್ನ ಸೊಸೆಗೆ ಮಾತ್ರೆ ಕೊಡಿ ಎಂದಿದ್ದಾಳೆ. ಇದನ್ನು ಕೇಳಿ ದಂಗಾದ ವೈದ್ಯರು ಏನು ಮಾಡಿದ್ರು ಗೊತ್ತಾ?

ಅಂದಹಾಗೆ ಸ್ತ್ರೀರೋಗತಜ್ಞ (Gynecologist) ಡಾ. ಶೈಫಾಲಿ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಡಾ. ಶೈಫಾಲಿ, ಔಷಧಿಯನ್ನು ಸರಿಯಾಗಿ ತೆಗೆದುಕೊಳ್ತೀದೀರಾ ಅಂತ ಗರ್ಭಿಣಿಯನ್ನು ಹೇಳ್ತಾರೆ. ಅದಕ್ಕೆ ಆಕೆ ಯಸ್ ಅಂತ ತಲೆಯಾಡಿಸ್ತಾರೆ. ಆದ್ರೆ ಪಕ್ಕದಲ್ಲಿ ಕುಳಿತಿದ್ದ ಅವಳ ಅತ್ತೆ, ಗಂಡು ಮಗು ಜನಿಸುವಂತೆ ಔಷಧಿ ನೀಡಿ ಅಂತ ಕೇಳ್ತಾರೆ. ಸೊಸೆಗೆ ಈಗಾಗ್ಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು ಎರಡು ಗಂಡು ಮಗು ಬೇಕೇಬೇಕು. ಸೊಸೆಗೆ ಉಪವಾಸ, ವ್ರತ ಅಂತ ಮಾಡಿಸ್ತಿದ್ದೇನೆ. ತಾಯತ ನೀಡಿದ್ದೇವೆ. ಈಗಿನದ್ದು ಗಂಡಾಗುವಂತೆ ಏನಾದ್ರೂ ಔಷಧಿ, ಮಾತ್ರೆ ನೀಡಿ ಅಂತಾಳೆ. ಇದನ್ನು ಕೇಳಿ ಶೈಫಾಲಿ ಶಾಕ್ ಆಗಿದ್ದಾರೆ. ನಂತರ ಅವರು ಆ ಅತ್ತೆಗೆ ವೈಜ್ಞಾನಿಕವಾಗಿರುವಂತಹ ಎಲ್ಲ ವಿಚಾರಗಳನ್ನು ತಿಳಿಸಿ ಹೇಳಿದ್ದಾರೆ.
ಯಸ್, ಗಂಡು ಮಗು ಆಗುವಂತೆ ಮಾತ್ರೆ ಕೊಡಿ ಎಂದು ಕೇಳಿದ ಅತ್ತೆಗೆ ಡಾಕ್ಟರ್ ಶೈಫಾಲಿ ಅವರುಹೆಣ್ಣು ಹಾಗೂ ಗಂಡು ಮಗು ಜನನ ತಾತಯತ ಅಥವಾ ವಿಧಿಯಿಂದ ನಿರ್ಧರಿಸುವಂತಹದ್ದಲ್ಲ. ತಾಯತ ಕಟ್ಟಿಕೊಂಡ್ರೆ ಗಂಡು ಮಗು ಆಗೋದಿಲ್ಲ. ಇದು ಕ್ರೋಮೋಸೋಮ್ (ವರ್ಣತಂತು)ವಿಗೆ ಸಂಬಂಧಿಸಿದ್ದು ಅಂತ ಅವರು ಹೇಳಿದ್ದಾರೆ. ಗಂಡು ಮಗು ಆಗಿಲ್ಲ ಅಂತ ಹೆಣ್ಮಕ್ಕಳನ್ನು ಸಮಾಜ ಜರಿಯತ್ತೆ. ಇದು ತಪ್ಪು. ಗಂಡು ಮಗುವಾಗೋದು ಸಂಪೂರ್ಣ ಪತಿಯ ಜವಾಬ್ದಾರಿ. ಹುಡುಗಿಯರಿಗೆ X ವರ್ಣತಂತುಗಳು ಸ್ಥಿರವಾಗಿರುತ್ತವೆ. ಹುಡುಗರಿಗೆ X ಮತ್ತು Y ವರ್ಣತಂತುಗಳಿವೆ. ಗಂಡು ಮಗುವಿಗೆ ಜನ್ಮ ನೀಡಲು Y ವರ್ಣತಂತು ಅಗತ್ಯವಿದೆ. ಇದು ಪುರುಷರಿಂದ ಮಾತ್ರ ಬರುತ್ತದೆ. ಪುರುಷರಲ್ಲಿ Y ವರ್ಣತಂತು ಹೆಚ್ಚಿದ್ದಾಗ ಮಾತ್ರ ಗಂಡು ಮಗು ಜನಿಸುತ್ತದೆ ಎಂದ ವೈದ್ಯರು, ನಿಮ್ಮ ಸೊಸೆಗೆ ಹೆಣ್ಣು ಮಗು ಜನಿಸಲು ನಿಮ್ಮ ಮಗನೇ ಕಾರಣ. ಗಂಡು ಮಗು ಆಗಿಲ್ಲ ಅಂತ ಉಪವಾಸ ವ್ರತ ಮಾಡಿಸೋದಾದ್ರೆ ನಿಮ್ಮ ಮಗನಿಗೆ ಮಾಡಿಸಿ, ಸೊಸೆಗಲ್ಲ ಅಂತ ಶೈಫಾಲಿ ಹೇಳಿದ್ದಾರೆ.
ಇದನ್ನೂ ಓದಿ:Death sentence: ಇಸ್ರೇಲ್ ಪರ ಬೇಹುಗಾರಿಕೆ ಆರೋಪ – ಇರಾನ್ನಲ್ಲಿ ಮೂವರಿಗೆ ಗಲ್ಲು – 700 ಜನರ ಬಂಧನ
Comments are closed.