

Bengaluru: ಪಿಜಿ ಮಾಲಿಕನೋರ್ವ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬನಶಂಕರಿಯ ಎರಡನೇ ಹಂತದಲ್ಲಿರುವ ಪಿಜಿಯಲ್ಲಿ ಕಳೆದ ವಾರವಷ್ಟೇ ಬಂದಿದ್ದಂತಹ ಯುವತಿಯೊಂದಿಗೆ ಪಿಜಿ ಮಾಲಿಕ ರವಿತೇಜಾ ರೆಡ್ಡಿ ಅಸಭ್ಯವಾಗಿ ವರ್ತಿಸಿದ್ದಾನೆ.
ಪಿಜಿಯಲ್ಲಿ ಇದ್ದಂತಹ ಯುವತಿ ಒಬ್ಬಳ ಚಿನ್ನದ ಉಂಗುರ ಕಳೆದು ಹೋಗಿದ್ದು, ಅದನ್ನು ವಿಚಾರಿಸುವ ನೆಪದಲ್ಲಿ ಈ ರೀತಿಯಾಗಿ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದು ತನಿಖೆ ನಡೆಯುತ್ತಿದೆ.













