Kodagu Rain: ಕೊಡಗಿನಲ್ಲಿ ಭಾರಿ ಗುಡುಗು ಸಹಿತ ಮಳೆ – ತುಂಬಿ ಹರಿಯುತ್ತಿರುವ ನದಿ ತೊರೆಗಳು – ಹೆಚ್ಚಾದ KRS ಜಲಾಶಯದ ಒಳಹರಿವು    

Share the Article

Kodagu Rain: ದಕ್ಷಿಣ ಕೊಡಗಿನ ಪೊನ್ನoಪೇಟೆ ತಾಲೂಕಿನಲ್ಲಿ ಗುಡುಗು ಸಹಿತ ಬಾರಿ ಮಳೆಯಾಗುತ್ತಿದೆ. ಪೊನ್ನoಪೇಟೆ ಕುಟ್ಟ, ಬಿರುನಾಣಿ,ಶೆಟ್ಟಿಗೇರಿ, ಹುದಿಕೇರಿ, ಬಿ. ಶೆಟ್ಟಿಗೇರಿ ವ್ಯಪ್ತಿಯಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು ಶ್ರೀಮಂಗಲ, ನಾಲಿಕೇರಿ ರಸ್ತೆಯಲ್ಲಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕಾವೇರಿ ನದಿ ನೀರಿನಲ್ಲಿ ಏರಿಕೆ ಕಂಡು ಬಂದ ಪರಿಣಾಮ ಕೆಆರ್ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಅಪಾಯದ ಮಟ್ಟ ತಲುಪುತ್ತಿರುವ ಹಿನ್ನಲೆಯಲ್ಲಿ ಹೆಚ್ಚುವರಿ 30 ಸಾವಿರ ಕ್ಯೂಸಕ್ಸ್ ನೀರನ್ನು ಹೊರ ಬಿಡಲಾಗುತ್ತಿದ್ದು, ತಗ್ಗು ಪ್ರದೇಶದಲ್ಲಿರುವ ಮತ್ತು ನದಿ ಎರಡು ದಂಡೆಗಳಲ್ಲಿ ಇರುವ ಸಾರ್ವಜನಿಕರು ಆಸ್ತಿ ಪಾಸ್ತಿ ಮತ್ತು ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳು ಸೂಚಿಸಿದ್ದು. ನದಿಯಲ್ಲಿನ ಶ್ರೀರಂಗಪಟ್ಟಣ, ಎಡಮುರಿ, ಬಲಮುರಿ, ನಿಮಿಷoಬಾ ಭಾಗದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ದೊಡ್ಡ ಕುಂದ ಗ್ರಾಮದಿಂದ ಕೊಡ್ಲಿಪೇಟೆ ಕಡೆಗೆ ತೆರಳುವ ಮುಖ್ಯ ರಸ್ತೆಗೆ ಒಣಗಿದ ಬೃಹತ್ ಮಾವಿನ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಸ್ಥಳೀಯರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಾಯದಿಂದ ಮರವನ್ನು ತೆರವು ಗೊಳಿಸಲಾಯಿತು.

ಇದನ್ನೂ ಓದಿ:Physical assault: ಲೈಂಗಿಕ ಕಿರುಕುಳ ಆರೋಪ – ಶಾಲಾ ಶಿಕ್ಷಕನ ಬಂಧನ – ಶಿಕ್ಷಕನ ಕಿರುಕುಳಕ್ಕೆ ಬಲಿಯಾದ ಬಾಲಕಿಯರೆಷ್ಟು ಗೊತ್ತಾ?

 

 

 

 

Comments are closed.