Home Crime Suicide: ರೀಲ್ಸ್‌ ವೀಡಿಯೋದಿಂದ ಪ್ರೇಮಿಗಳ ನಡುವೆ ಜಗಳ: ಪ್ರೇಯಸಿ ಆತ್ಮಹತ್ಯೆ

Suicide: ರೀಲ್ಸ್‌ ವೀಡಿಯೋದಿಂದ ಪ್ರೇಮಿಗಳ ನಡುವೆ ಜಗಳ: ಪ್ರೇಯಸಿ ಆತ್ಮಹತ್ಯೆ

Hindu neighbor gifts plot of land

Hindu neighbour gifts land to Muslim journalist

Suicide: ರೀಲ್ಸ್‌ನ ಫೊಟೋಸ್‌ ಪ್ರೇಮಿಗಳ ನಡುವೆ ಜಗಳ ಉಂಟು ಮಾಡಿದ್ದು, ಪ್ರೇಯಸಿ ಚೈತನ್ಯ ಎಂಬಾಕೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತುಮಕೂರು ಗ್ರಾಮಾಂತರದ ಹೊಸಹಳ್ಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಚೈತನ್ಯ ಫೈನಲ್‌ ಇಯರ್‌ ಡಿಗ್ರಿ ಕಲಿಯುತ್ತಿದ್ದು, ಜೊತೆ ಜೊತೆಗೆ ಮಾಡೆಲಿಂಗ್‌ನ ಮೇಕಪ್‌ ಆರ್ಟಿಸ್ಟ್‌ ಆಗಿದ್ದಳು. ಫೊಟೋಶೂಟ್‌ ಮಾಡಿಸುವುದು, ರೀಲ್ಸ್‌ ಮಾಡುವುದು ಇವೆಲ್ಲ ಈಕೆ ಮಾಡುತ್ತಿದ್ದಳು. ತನ್ನ ತಾಯಿ ಜೊತೆ ಚೈತನ್ಯ ವಾಸವಿದ್ದು, ತಾಯಿ ಮನೆ ಬಳಿ ಸಣ್ಣ ಅಂಗಡಿ ನಡೆಸುತ್ತಿದ್ದಾರೆ.

ಚೈತನ್ಯ ಪಕ್ಕದ ರಾಮೇನಹಳ್ಳಿ ಊರಿನ ವಿಜಯ್‌ ಎನ್ನುವ ಯುವಕನನ್ನು ಪ್ರೀತಿ ಮಾಡುತ್ತಿದ್ದಳು. ಇದಕ್ಕೆ ಪೋಷಕರ ವಿರೋಧ ಇತ್ತು. ಎರಡು ವರ್ಷದ ಹಿಂದೆ ವಿಜಯ್‌ಗೆ ಹಾಗೂ ಚೈತನ್ಯಗೆ ವಾರ್ನ್‌ ಮಾಡಿದ್ದರು. ಆದರೂ ಇವರಿಬ್ಬರ ಪ್ರೀತಿ ಗುಟ್ಟಾಗಿಯೇ ನಡೆಯುತ್ತಿತ್ತು.

ಆದರೆ ನಿನ್ನೆ ರಾತ್ರಿ ವಾಟ್ಸಪ್‌ ಸ್ಟೇಟಸ್‌ಗೆ ಹಾಕಿದ್ದ ರೀಲ್ಸ್‌ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿದೆ. ಈ ಜಗಳ ತಾಯಿಗೆ ತಿಳಿಬಾರದೆಂದು ಚೈತನ್ಯ ಡೋರ್‌ ಲಾಕ್‌ ಮಾಡಿದ್ದಾಳೆ. ನಂತರ ಇವರಿಬ್ಬರ ನಡುವೆ ಏನಾಯಿತೋ ಗೊತ್ತಿಲ್ಲ. ರೂಮ್‌ನ ಕಿಟಕಿಗೆ ಸೀರೆಯಿಂದ ನೇಣು ಬಿಗಿದು ಚೈತನ್ಯ ಆತ್ಮಹತ್ಯೆ ಮಾಡಿದ್ದಾಳೆ.

ಸ್ಟ್ರೀಟ್‌ ಫೋಟೋಗ್ರಾಫರ್‌ ಒಬ್ಬ ಮೇಡಂ ನೀವು ಚೆನ್ನಾಗಿ ಕಾಣ್ತೀರಿ, ನಿಮ್ಮ ಫೊಟೋ ತೆಗೆಯಬಹುದೇ ಎಂದು ಹೇಳಿ ಬರೋಬ್ಬರಿ 25 ಫೋಟೋಗಳನ್ನು ತನ್ನ ಕ್ಯಾಮೆರಾದಲ್ಲಿ ತೆಗೆದಿದ್ದಾನೆ. ಈ ಫೊಟೋಗಳನ್ನು ಹಾಗೂ ವಿಡಿಯೋವನ್ನು ಚೈತನ್ಯ ತನ್ನ ಇನ್ಸ್‌ಟಾಗ್ರಾಂಗೆ ಹಾಕಿದ್ದಾಳೆ. ಇದನ್ನು ನೋಡಿ ಸಹಿಸದ ಪ್ರೇಮಿ ವಿಜಯ್‌ ಗೆಳತಿಯ ಮನೆಗೆ ಬಂದು ಜಗಳ ಮಾಡಿದ್ದಾಳೆ. ಈ ವೇಳೆ ಚೈತನ್ಯ ತಾಯಿ ಮನೆಯ ಒಳಗೆ ಇದ್ದರು. ಆದರೆ ಇವರಿದ್ದ ಕೋಣೆಯ ಬಾಗಿಲು ಲಾಕ್‌ ಆಗಿದ್ದರಿಂದ ಚೈತನ್ಯ ಹಾಗೂ ವಿಜಯ್‌ ಕಿಟಕಿ ಬಳಿ ಜಗಳ ಮಾಡಿಕೊಂಡಿದ್ದರು.

ಫೊಟೋಗ್ರಾಫರ್‌ ತೆಗೆದ ಫೊಟೋಗಳಿಗೆ ಸಾಂಗ್‌ ಹಾಕಿ ರೀಲ್ಸ್‌ ಮಾಡಿದ್ದು, ನಿನ್ನೆ ರಾತ್ರಿ ಇದನ್ನು ತಾಯಿಗೆ ತೋರಿಸಿದ್ದಾಳೆ ಚೈತನ್ಯಾ. ತಾಯಿ ಈ ವಿಡಿಯೋ ಹಾಕಬೇಡ ಎಂದು ಬುದ್ಧಿವಾದ ಹೇಳಿದರೂ ರೀಲ್ಸ್‌ ಅಪ್ಲೋಡ್‌ ಮಾಡಿದ್ದಾಳೆ. ಇದನ್ನು ನೋಡಿ ವಿಜಯ್‌ ಜಗಳ ಮಾಡಿದ್ದಾನೆ.

ಚೈತನ್ಯ ಸಾವಿಗೆ ವಿಜಯ್‌ ಕಾರಣ ಎಂದು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.