Viral Video : ಅಂಗಡಿ ನೋಡಿಕೊಳ್ಳುತ್ತಿದ್ದ ಅಜ್ಜಿಯನ್ನು ATM ಕಾಯಲು ನೇಮಕ – ಅಂಗಡಿ ನನ್ನದೆಂದು ATM ಒಳಗೆ ಯಾರನ್ನು ಬಿಡದ ಅಜ್ಜಿ, ವಿಡಿಯೋ ವೈರಲ್

Share the Article

Viral Video : ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ಅಜ್ಜಿ ಒಬ್ಬರನ್ನು ಎಟಿಎಂ ಕಾಯಲು ನೇಮಕ ಮಾಡಿಕೊಂಡ ಪರಿಣಾಮ ಹಣ ಬಿಡಿಸಲು ಎಟಿಎಂಗೆ ಬರುತ್ತಿದ್ದ ಜನರನ್ನು ಅಜ್ಜಿಯು ಅಂಗಡಿ (ATM) ನನ್ನದೆಂದು ಒಳಗಡೆ ಬಿಡದಿರುವಂತಹ ಒಂದು ವಿಚಿತ್ರ ಹಾಗೂ ನಗುವಿನ ಪ್ರಸಂಗವನ್ನು ಬೆಳಕಿಗೆ ಬಂದಿದೆ.

ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಹಲವಾರು ಮಂದಿ ಎಟಿಎಂ ಎದುರುಗಡೆ ಹಣ ಬಿಡಿಸಲು ನಿಂತಿದ್ದಾರೆ. ಅಲ್ಲದೆ ಅಜ್ಜಿಗೆ ಅವರೆಲ್ಲರೂ ತಿಳಿ ಹೇಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅಜ್ಜಿಯು ಎಟಿಎಂ ಬಾಗಿಲಿಗೆ ಅಡ್ಡವಾಗಿ ನಿಂತು ಅಂಗಡಿ ಒಳಗೆ ಯಾರನ್ನು ಬಿಡುವುದಿಲ್ಲ ಎಂದು ಎಲ್ಲರನ್ನು ತಡೆದಿದ್ದಾಳೆ. ಜನರು ಎಷ್ಟೇ ಹೇಳಿದರೂ ಕೂಡ ಅಜ್ಜಿ ಸಿಟ್ಟಿನಿಂದ ಎಲ್ಲರನ್ನು ತಡೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

https://www.instagram.com/reel/DJwf6BMhs2K/?igsh=MTY2aWdkazlyZHEwcA==

ಇದನ್ನೂ ಓದಿ: Dharmasthala: ಧರ್ಮಸ್ಥಳ ಗ್ರಾಮದಲ್ಲಿ ನಡೆದ, ಅಪರಾಧ ಕೃತ್ಯಗಳ ಮಾಹಿತಿ ನನಗೆ ಗೊತ್ತಿದೆ: ಠಾಣೆಗೆ ಶರಣಾಗಿ ಮಾಹಿತಿ ನೀಡಲು ಸಿದ್ಧ!

Comments are closed.