Home News ಪಾಕ್‌ಗೆ ಯಾವುದೇ ಕಾರಣಕ್ಕೂ ನೀರು ಬಿಡೋದಿಲ್ಲ: ಸಿಂಧೂ ಜಲ ಒಪ್ಪಂದದ ಮರುಸ್ಥಾಪನೆ ಅಸಾಧ್ಯ; ಅಮಿತ್ ಶಾ

ಪಾಕ್‌ಗೆ ಯಾವುದೇ ಕಾರಣಕ್ಕೂ ನೀರು ಬಿಡೋದಿಲ್ಲ: ಸಿಂಧೂ ಜಲ ಒಪ್ಪಂದದ ಮರುಸ್ಥಾಪನೆ ಅಸಾಧ್ಯ; ಅಮಿತ್ ಶಾ

Amith Shah

Hindu neighbor gifts plot of land

Hindu neighbour gifts land to Muslim journalist

New delhi: ಪಾಕಿಸ್ತಾನ ಜತೆಗಿನ ಹಳೆಯ ಸಿಂಧೂ ಜಲ ಒಪ್ಪಂದದ ಮರುಸ್ಥಾಪನೆ ಇಲ್ಲ, ಪಾಕಿಗೆ ಯಾವುದೆ ಕಾರಣಕ್ಕೂ ನೀರು ಬಿಡೋದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಈ ಜಲ ಒಪ್ಪಂದವನ್ನು ಹಿಂಪಡೆಯಲಾಗಿೆತ್ತು.

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ನಡೆದಿತ್ತು. 1960ರ ಸಿಂಧೂ ಜಲ ಒಪ್ಪಂದ ಭಾರತದ ಪಾಲಿಗೆ ನ್ಯಾಯಸಮ್ಮತವಲ್ಲ ಎಂದು ವಿವರಿಸಿದ ಅಮಿತ್ ಶಾ, ಮತ್ತೆ ಈ ಒಪ್ಪಂದದ ಮರು ಸ್ಥಾಪನೆಯ ಯಾವುದೇ ಸಾಧ್ಯತೆಯೇ ಇಲ್ಲ ಎಂದು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

“ಸಿಂಧೂ ಒಪ್ಪಂದದ ಮರುಸ್ಥಾಪನೆ ಇಲ್ಲ. ಅಲ್ಲಿಗೆ ಹರಿಯುವ ನೀರನ್ನು ಕಾಲುವೆ ನಿರ್ಮಿಸುವ ಮೂಲಕ ರಾಜಸ್ಥಾನಕ್ಕೆ ಹರಿಸಲಿದ್ದೇವೆ. ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಪಾಕಿಸ್ತಾನ ಪಡೆಯುತ್ತಿದ್ದ ನೀರಿನಿಂದ ಇನ್ಮುಂದೆ ವಂಚಿತವಾಗಲಿದೆ” ಎಂದು ಅವರು ವಿವರಿಸಿದರು.

ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಸಿಂಧೂ ಜಲ ಒಪ್ಪಂದದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಸಿಂಧೂ, ಜೇಲಂ ಮತ್ತು ಚೆನಾಬ್ ನದಿಗಳ ನೀರನ್ನು ಪಾಕಿಸ್ತಾನಕ್ಕೆ ಹಾಗೂ ಪೂರ್ವಾಭಿಮುಖವಾಗಿ ಹರಿಯುವ ಬಿಯಾಸ್, ರಾವಿ ಮತ್ತು ಸಟ್ಲೇಜ್ ನದಿ ನೀರನ್ನು ಭಾರತಕ್ಕೆ ಹಂಚಿಕೆ ಮಾಡಲಾಗಿದೆ. ಜಲವಿದ್ಯುತ್ ಮತ್ತು ನೀರಾವರಿಯ ಕುರಿತಾಗಿ ಪರಸ್ಪರ ಸಹಕಾರದ ಒಪ್ಪಂದಗಳಿಗೆ ಅಂದು ಅವಕಾಶ ಮಾಡಿಕೊಡಲಾಗಿತ್ತು.

ಭಾರತಕ್ಕೆ ಸೇರಬೇಕಾದ ನೀರನ್ನು ನಾವು ಬಳಸಿಕೊಳ್ಳುತ್ತೇವೆ. ಪಾಕಿಸ್ತಾನಕ್ಕೆ ಹರಿಯುತ್ತಿದ್ದ ನೀರನ್ನು ಇನ್ಮುಂದೆ ರಾಜಸ್ಥಾನಕ್ಕೆ ಕಾಲುವೆ ನಿರ್ಮಿಸುವ ಮೂಲಕ ತಿರುಗಿಸುತ್ತೇವೆ. ಅನ್ಯಾಯವಾಗಿ ಪಾಕಿಸ್ತಾನವು ಪಡೆಯುತ್ತಿದ್ದ ನೀರಿನಿಂದ ಅದು ವಂಚಿತವಾಗಲಿದೆ ಎಂದಿದ್ದಾರೆ ಅಮಿತ್ ಶಾ.

ಇದನ್ನೂ ಓದಿ:Odisha: ಅಂತರ್ಜಾತಿ ವಿವಾಹವಾದ ಮನೆ ಮಗಳು- ತಲೆ ಬೋಳಿಸಿಕೊಂಡು ಪಾಪ ಪರಿಹರಿಸಿಕೊಂಡ ಯುವತಿ ಕುಟುಂಬದ 40 ಸದಸ್ಯರು!!