Preeti Traleja: ‘ಮತಾಂತರವಾಗಲು ಒಪ್ಪದಿದ್ದಕ್ಕೆ ಮಾರಣಾಂತಿಕ ಹಿಂಸೆ ನೀಡಿದ’- ಸ್ಟಾರ್ ನಟಿಯ ಮೇಲೆ ಗಂಡನಿಂದಲೇ ಹಲ್ಲೆ

Preeti Traleja: ಇಂದು ಮತಾಂತರವೆಂಬುದು ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಯಾವುದೇ ಸೆಲೆಬ್ರಿಟಿಗಳಾಗಲಿ, ಸ್ಟಾರ್ ಗಳಾಗಲಿ, ದೊಡ್ಡ ವ್ಯಕ್ತಿಗಳಾಗಲಿ, ಯಾರನ್ನು ಕೂಡ ಇದು ಬಿಡದಂತಹ ಪರಿಸ್ಥಿತಿಯನ್ನು ತಲುಪಿದೆ. ಇದೀಗ ಇಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ಮತಾಂತರವಾಗಲು ಒಪ್ಪದಿದ್ದಕ್ಕೆ ಸ್ಟಾರ್ ನಟಿಯ ಮೇಲೆ ಆಕೆಯ ಗಂಡನೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಕುರಿತಾಗಿ ನಟಿ ಪೋಸ್ಟ್ ಮಾಡಿದ್ದು ಅದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದ ನಟಿ ಪ್ರೀತಿ ತಲ್ರೇಜಾ ಕೌಟುಂಬಿಕ ಹಿಂಸೆಯಿಂದ ನೊಂದಿದ್ದಾರೆ. ಈ ಸುಂದರಿ ಅಭಿಜೀತ್ ಪೆಟ್ಕರ್ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಸುಮಾರು ಮೂರು ವರ್ಷಗಳ ಕಾಲ ಡೇಟಿಂಗ್ ನಂತರ, ಇಬ್ಬರೂ ಮದುವೆಯಾದರು. ಅಭಿಜೀತ್ ಪೆಟ್ಕರ್ ಅವರ ಹೆಸರು ಕೇಳಿ ಆತ ಹಿಂದೂ ಎಂದು ಪ್ರೀತಿ ಭಾವಿಸಿದ್ದರು. ಆದರೆ ಮದುವೆಯ ಬಳಿಕ ಗಂಡನ ನಿಜ ಬಣ್ಣ ಬಯಲಾಗಿದೆ.
ಮದುವೆಯಾಗುತ್ತಿದ್ದಂತೆ ಆತ ಹಿಂದೂ ಧರ್ಮದಿಂದ ಮತಾಂತರಗೊಳ್ಳುವಂತೆ ಆತ ತನ್ನ ಮೇಲೆ ಒತ್ತಡ ಹೇರಿದ್ದಾಗಿ ನಟಿ ಪ್ರೀತಿ ತಲ್ರೇಜಾ ಹೇಳಿದ್ದಾರೆ. ತಾನು ನಿರಾಕರಿಸಿದಾಗ ಅವನು ತನ್ನನ್ನು ತೀವ್ರವಾಗಿ ಹೊಡೆದಿದ್ದಾಗಿ ಆಕೆ ಹೇಳಿದ್ದಾರೆ. ಅಲ್ಲದೆ ಪತಿ ನೀಡಿದ ಹಿಂಸೆಯಿಂದ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕೂಡ ಮುಂದಾಗಿದ್ದರಂತೆ.
ಸಧ್ಯ ಪ್ರೀತಿ ತಲ್ರೇಜಾ ತನ್ನ ಪತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ತನಗೆ ಆದ ಚಿತ್ರಹಿಂಸೆಯನ್ನು ವಿವರಿಸಿದ್ದಾರೆ. ತನಗೆ ನ್ಯಾಯ ಒದಗಿಸುವಂತೆ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ. ಅವರು ಟ್ವಿಟರ್‌ನಲ್ಲಿ ಪ್ರಧಾನಿ ಕಚೇರಿ (ಪಿಎಂಒ) ಮತ್ತು ಥಾಣೆ ಪೊಲೀಸರನ್ನು ಟ್ಯಾಗ್ ಮಾಡಿ ತನ್ನ ಪತಿಯ ಕಿರುಕುಳದ ಬಗ್ಗೆ ವಿವರಿಸಿದ್ದಾರೆ.
Comments are closed.