Murder: ಪ್ರಿಯಕರನಿಗಾಗಿ ಪತಿಯನ್ನೇ ಕೊಚ್ಚಿ ಕೊಲೆ ಮಾಡಿದ ಪತ್ನಿ

Share the Article

Murder: ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ರಾಜಸ್ಥಾನದ ಅಲ್ವಾರ್ನಲ್ಲಿ ಈ ಘಟನೆ ನಡೆದಿದೆ. ಪತಿಯನ್ನು ಪತ್ನಿಯ ಪ್ರಿಯಕರ ಜೊತೆ ಇತರರು ಸೇರಿ ಜೂನ್‌ 7 ರಂದು ಕೊಲೆ ಮಾಡಿದ್ದಾರೆ.

ಮಾಧ್ಯಮ ವರದಿ ಪ್ರಕಾರ, ಜೂನ್‌ 7 ರಂದು ತಡರಾತ್ರಿ ಕೆಲವರು ಮನೆಗೆ ನುಗ್ಗಿ ತಂದೆಯನ್ನು ಕೊಂದಿರುವುದಾಗಿ ಅಪ್ರಾಪ್ತ ಮಗ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಆದರೆ ಅವನ ತಾಯಿ ಅಲ್ಲಿ ನಿಂತು ಎಲ್ಲಾ ನೋಡುತ್ತಿದ್ದರು ಎಂದು ಹೇಳಿದ್ದು, ಕೊಲೆಗಾರರಲ್ಲಿ ಒಬ್ಬ ಕಾಶಿ ಅಂಕಲ್‌ ಎಂದು ಬಾಲಕ ಗುರುತಿಸಿದ್ದಾನೆ.

ಮಾನ್‌ ಸಿಂಗ್‌ ಜಾತವ್‌ ಎಂಬ ವ್ಯಕ್ತಿ ಕೊಲೆಯಾಗಿದ್ದಾನೆ. ಈತನ ಪತ್ನಿ ಆತನ ಸಾವು ಅನಾರೋಗ್ಯದಿಂದ ಆಗಿದೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾಳೆ.

ಮಗ ಹೇಳಿರುವ ಪ್ರಕಾರ, ಜೂನ್‌ 7 ರಂದು ತನ್ನ ತಾಯಿ ಮನೆಯ ಬಾಗಿಲು ತೆರೆದಿದ್ದು, ಕಾಶಿ ಅಂಕಲ್‌ ಸೇರಿ ನಾಲ್ವರು ಪುರುಷರು ಮನೆಯೊಳಗೆ ಬಂದಿದ್ದು, ನಂತರ ಅಪ್ಪನನ್ನು ಉಸಿರುಗಟ್ಟಿಸಿ ಹಲ್ಲೆ ಮಾಡಿ ಸಾಯಿಸಿದ್ದಾರೆ ಎಂದು ಹೇಳಿದ್ದಾನೆ. ನಾನು ಇದನ್ನೆಲ್ಲ ನೋಡಿ ಭಯಗೊಂಡು ನಿದ್ದೆ ಮಾಡುವವನಂತೆ ನಟಿಸಿದೆ ಎಂದು ಹೇಳಿದ್ದಾನೆ.

ಗುತ್ತಿಗೆ ಹಂತಕರಿಗೆ ಎರಡು ಲಕ್ಷ ಹಣ ನೀಡುವ ಮೂಲಕ ಅನಿತಾ ಮತ್ತು ಕಾಶಿರಾಮ್‌ ಮಹಿಳೆಯ ಪತಿಯ ಕೊಲೆಗೆ ವ್ಯವಸ್ಥೆ ಮಾಡಿದ್ದರು ಎಂದು ವರದಿಯಾಗಿದೆ.

Comments are closed.