Job Offer: ಕಾಡು ಮನುಷ್ಯರ ವೇಷ ಧರಿಸುವವರಿಗೆ ದಿನಕ್ಕೆ ₹6,000 ವೇತನ – ಚೀನಾದಿಂದ ಹೊಸ ಉದ್ಯೋಗ ಆಫರ್

Share the Article

Job Offer: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಶೆನ್ನೊಂಶ್ಚಿಯಾ ಮೀಸಲು ಪೃಕೃತಿ ಪ್ರದೇಶದಲ್ಲಿ ಪ್ರವಾಸಿಗರನ್ನು ಸೆಳೆಯಲು ಕಾಡು ಮನುಷ್ಯರ ವೇಷಭೂಷಣ ಧರಿಸಿ ನಟಿಸುವವರಿಗೆ ಉದ್ಯೋಗಾವಕಾಶ ನೀಡಲಾಗಿದೆ. ಜುಲೈನಿಂದ ಆಗಸ್ಟ್‌ ವರೆಗೆ ಮಾತ್ರ ಕೆಲಸ ಇರಲಿದ್ದು, ದಿನಕ್ಕೆ 500 ಯುವಾನ್ (ಅಂದಾಜು ₹6,000) ವೇತನ ನೀಡಲಾಗುತ್ತದೆ ಎಂದು ಸೌತ್‌ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ಕೆಲಸಕ್ಕೆ ನೇಮಕಾತಿ ಪ್ರಾರಂಭವಾದ ಎರಡೇ ದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ವರದಿಯಾಗಿದೆ.

ಚೀನಾದ ಹುಬೈ ಪ್ರಾಂತ್ಯದಲ್ಲಿರುವ ಶೆನ್ನಾಂಗ್ಜಿಯಾ ರಾಷ್ಟ್ರೀಯ ಪ್ರಕೃತಿ ಮೀಸಲು ಪ್ರದೇಶದಲ್ಲಿ ಒಂದು. ಮಧ್ಯ ಚೀನಾದಲ್ಲಿರುವ ಈ ನೈಸರ್ಗಿಕ ರಮಣೀಯ ತಾಣವು ಪ್ರವಾಸಿಗರಿಗೆ ಕಾಡು ಮನುಷ್ಯರಂತೆ ನಟಿಸಲು ಜನರನ್ನು ನೇಮಿಸಿಕೊಳ್ಳುತ್ತಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ.

 

ಉದ್ಯೋಗ ವಿವರಣೆ:

ನೇಮಕಾತಿ ಜಾಹೀರಾತಿನ ಪ್ರಕಾರ, ಈ ಪಾತ್ರಕ್ಕಾಗಿ ನೇಮಕಗೊಳ್ಳುವ ಯಾವುದೇ ವ್ಯಕ್ತಿಯು ಕಾಡು ಮನುಷ್ಯರ ಉಡುಪುಗಳನ್ನು ಧರಿಸಬೇಕು, ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗಬೇಕು, ನೃತ್ಯ ಮಾಡಬೇಕು ಮತ್ತು ಪ್ರವಾಸಿಗರೊಂದಿಗೆ ಇತರ ಸಂವಹನಗಳಲ್ಲಿ ತೊಡಗಿಸಿಕೊಳ್ಳಬೇಕು. ಕಚ್ಚಾ ಆಹಾರ ಸೇವಿಸುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡುವುದು.

 

ಜಾಹೀರಾತಿನ ಪ್ರಕಾರ “ಅನಾಗರಿಕರು” ಪ್ರವಾಸಿಗರು ನೀಡುವ ಆಹಾರವನ್ನು ಸ್ವೀಕರಿಸಿ ತಿನ್ನಬೇಕು. “ಹಸಿ ಆಹಾರವನ್ನು ತಿನ್ನಲು ಇಷ್ಟಪಡುವವರಿಗೆ ಸಹ ಆದ್ಯತೆ ನೀಡಲಾಗುವುದು” ಎಂದು ಕಂಪನಿಯು ಮಾಧ್ಯಮಗಳಿಗೆ ತಿಳಿಸಿದೆ. “ಮುಕ್ತ ವ್ಯಕ್ತಿತ್ವ ಹೊಂದಿರುವವರು, ಸಣ್ಣ ವೀಡಿಯೊಗಳನ್ನು ಚಿತ್ರೀಕರಿಸುವಲ್ಲಿ ಸೃಜನಶೀಲರು ಮತ್ತು ದೀರ್ಘಕಾಲ ಕಾಡಿನಲ್ಲಿ ವಾಸಿಸಲು ಒಗ್ಗಿಕೊಂಡಿರುವವರಿಗೆ ಆದ್ಯತೆ ನೀಡಲಾಗುವುದು” ಎಂದು ಅದು ಹೇಳಿದೆ.

 

ಒಂದು ಸನ್ನಿವೇಶವನ್ನು ಹೊರತುಪಡಿಸಿ, ಪ್ರವಾಸಿಗರೊಂದಿಗೆ ಮಾತನಾಡುವಂತಿಲ್ಲ

“ಕಾಡು ಮನುಷ್ಯ ವೇಷಧಾರಿಗಳು” ತಮ್ಮ ಪಾಳಿಯಲ್ಲಿ ಮಾತನಾಡಲು ಅನುಮತಿಸಲಾಗುವುದಿಲ್ಲ. ಪ್ರವಾಸಿಗರೊಂದಿಗೆ ಸಂವಹನ ನಡೆಸುವಾಗ ಅವರು ಕೇವಲ ಒಂದು ಶಬ್ದವನ್ನು ಮಾಡಬಹುದು. ಉದ್ಯೋಗ ಜಾಹೀರಾತಿನ ಪ್ರಕಾರ ಪ್ರವಾಸಿಗರು ಶೌಚಾಲಯಗಳಿಗೆ ನಿರ್ದೇಶನಗಳನ್ನು ಕೇಳಿದಾಗ ಮಾತ್ರ ಅವರು ಮಾತನಾಡಬಹುದು. ಕೆಲಸಗಾರರು ಕಾಡು ಪ್ರಾಣಿಗಳನ್ನು ಮುಟ್ಟುವುದನ್ನು ಸಹ ನಿಷೇಧಿಸಲಾಗಿದೆ ಮತ್ತು ಕೆಲ ಅಪಾಯ ಜೀವಿಗಳು ಕಂಡು ಬಂದರೆ ತಕ್ಷಣವೇ ಓಡಿಹೋಗಬೇಕು ಎಂದು ಉದ್ಯೋಗ ವಿವರಣೆಯಲ್ಲಿ ತಿಳಿಸಲಾಗಿದೆ.

Comments are closed.