Air India: 7 ಏರ್‌ಇಂಡಿಯಾ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಬಂದ್‌

Share the Article

Air India: ಏರ್‌ಇಂಡಿಯಾ ಒಟ್ಟು ಏಳು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಿದೆ. ತಾಂತ್ರಿಕ ದೋಷ ಮತ್ತು ವಿಮಾನಗಳ ಲಭ್ಯತೆ ಇಲ್ಲದಿರುವುದು ಸೇರಿ ವಿವಿಧ ಕಾರಣಗಳನ್ನು ನೀಡಲಾಗಿದೆ. ರದ್ದು ಮಾಡಲಾದ ವಿಮಾನಗಳಲ್ಲಿ ಆರು ಬೋಯಿಂಗ್‌ 787-8 ಡ್ರೀಮ್‌ಲೈನರ್‌ಗಳು ಇದೆ.

ಯಾವೆಲ್ಲ ವಿಮಾನ ರದ್ದು?
AI915 – ದೆಹಲಿಯಿಂದ ದುಬೈ – B788 ಡ್ರೀಮ್‌ಲೈನರ್
AI153 – ದೆಹಲಿಯಿಂದ ವಿಯೆನ್ನಾ – B788 ಡ್ರೀಮ್‌ಲೈನರ್
AI143 – ದೆಹಲಿಯಿಂದ ಪ್ಯಾರಿಸ್ – B788 ಡ್ರೀಮ್‌ಲೈನರ್
AI159 – ಅಹಮದಾಬಾದ್‌ನಿಂದ ಲಂಡನ್ – B788 ಡ್ರೀಮ್‌ಲೈನರ್
AI170 – ಲಂಡನ್‌ನಿಂದ ಅಮೃತಸರ – B788 ಡ್ರೀಮ್‌ಲೈನರ್
AI133 – ಬೆಂಗಳೂರಿನಿಂದ ಲಂಡನ್ – B788 ಡ್ರೀಮ್‌ಲೈನರ್
AI179 – ಮುಂಬೈನಿಂದ ಸ್ಯಾನ್ ಫ್ರಾನ್ಸಿಸ್ಕೋ – B777

ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತಾ, ಆದಷ್ಟು ಭೇಗ ಅವರು ತೆರಳಬೇಕಾದ ಜಾಗಗಳಿಗೆ ತಲುಪಿಸಲು ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ. ನಾವು ಹೋಟೆಲ್‌ ವಸತಿ ಸೌಕರ್ಯವನ್ನು ಒದಗಿಸುತ್ತೇವೆ. ಮರುಪಾವತಿ ಅಥವಾ ಉಚಿತ ಮರುಹೊಂದಿಸುವಿಕೆಯನ್ನು ಕೂಡಾ ನೀಡುತ್ತಿರುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್‌ 12 ರಂದು ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರ್ಘಟನೆ ನಂತರ ಏರ್‌ಇಂಡಿಯಾ ತನ್ನ ವಿಮಾನಗಳಲ್ಲಿ ಅದರಲ್ಲೂ ಬೋಯಿಂಗ್‌ 787 ಡ್ರೀಮ್‌ಲೈನರ್‌ ಫ್ಲೀಟ್‌ನ ಸುರಕ್ಷತೆಯನ್ನು ಹೆಚ್ಚಿಸಿದೆ.

Comments are closed.