Bengaluru: ಕಂಠಪೂರ್ತಿ ಮದ್ಯ ಕುಡಿಸಿ ಚಿನ್ನಾಭರಣ ದೋಚಿದ ಕುಚಿಕು ಗೆಳೆಯರು!

Bengaluru: ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತನಿಗೆ ಕಂಠಪೂರ್ತಿ ಮದ್ಯ ಕುಡಿಸಿದ ಸ್ನೇಹಿತರೇ ಗ್ಯಾಂಗ್‌ವೊಂದಕ್ಕೆ ಸುಪಾರಿ ನೀಡಿ ಆತನ ಚಿನ್ನಾಭರಣ ದರೋಡೆ ಮಾಡಿಸಿರುವ ಘಟನೆ ನಡೆದಿದೆ.

ದರೋಡೆಗೊಳಗಾದವರು ಉದ್ಯಮಿ ಚಂದನ್ ಎಂದು ತಿಳಿದು ಬಂದಿದೆ. ಈ ಸಂಬಂಧ ಚಂದನ್ ನೀಡಿದ ದೂರಿನ ಮೇರೆಗೆ ಆತನ ಸ್ನೇಹಿತರಾದ ಚಂದನ್, ಪವನ್, ಅಚಲ್, ಪ್ರೇಮ್ ಶೆಟ್ಟಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ ಲಕ್ಷಾಂತರ ರೂ.ಮೌಲ್ಯದ 40 ಗ್ರಾಂ ಚಿನ್ನದ ಸರ, 20 ಗ್ರಾಂ ಕೈ ಕಡಗವನ್ನು ಹಾಗೂ 9 ಗ್ರಾಂ ಉಂಗುರ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಎ.30 ರಂದು ಮೂವರು ಚಿಕ್ಕಜಾಲದ ನೆಕ್ಟ್ ಚಾಪ್ಟರ್ ಪಬ್ ಗೆ ಹೋಗಿದ್ದರು. ಈ ಸಂದರ್ಭ ಚಂದನ್‌ಗೆ ಪವನ್ ಮತ್ತು ಅಚಲ್ ಕಂಠಪೂರ್ತಿ ಕುಡಿಸಿದ್ದರು. ಬಳಿಕ ಪವನ್ ಹಾಗೂ ಅಚಲ್, ಚಂದನ್‌ನನ್ನು ಕಾರಿನತ್ತ ಕರೆದೊಯ್ದಿದ್ದಾರೆ. ಈ ವೇಳೆ ಅಚಲ್ ಜೆ.ಪಿ ನಗರದ ಪ್ರೇಮ್ ಶೆಟ್ಟಿ ಹಾಗೂ ಆತನ ಗ್ಯಾಂಗ್‌ಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಅದರಂತೆ ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳು ಚಂದನ್‌ಗೆ ಹಿಗ್ಗಾಮುಗ್ಗಾ ಥಳಿಸಿ ಆತನ ಬಳಿಯಿದ್ದ ಚಿನ್ನಾಭರಣ ದೋಚಿದ್ದಾರೆ.
Comments are closed.