KSRTC: ಕೊನೆಗೂ ಕೆ.ಎಸ್‌.ಆರ್.ಟಿ.ಸಿಗೆ ತೆರಳುವ ಕಾಲುದಾರಿಗೆ ದೊರಕಿತು ಮುಕ್ತಿ – ಹಲವು ವರ್ಷಗಳಿಂದ ಜಾರು ಬಂಡಿಯಂತಿದ್ದ ಕಾಲುರಸ್ತೆ 

Share the Article

KSRTC: ವಿರಾಜಪೇಟೆ, ಗಡಿಯಾರ ಕಂಬದಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ತೆರಳುವ ಕಾಲುದಾರಿ ಪ್ರತಿದಿನ ನೀರು ಮತ್ತು ಕೆಸರು ತುಂಬಿ ನಡೆದಾಡಲಲು ಕಷ್ಟಕರವಾಗುತ್ತಿತ್ತು. ಈ ಬಗ್ಗೆ ಮಾಧ್ಯಮಗಳು ಹಲವು ಬಾರಿ ವರದಿ ಪ್ರಕಟಿಸಿತ್ತು. ಶಾಲಾ ಕಾಲೇಜು ಮಕ್ಕಳು ಸಾರ್ವಜನಿಕರು ಅತಿಯಾಗಿ ಈ ಕಾಲುದಾರಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ವರದಿ ಪ್ರಕಟಿಸಿದ ಬೆನ್ನಲ್ಲೇ ಪುರಸಭೆಯ ಮಾಸಿಕ ಸಭೆಯಲ್ಲಿ ಈ ಬಗ್ಗೆ ಚರ್ಚೆ ಕೈಗೊಳ್ಳಲಾಗಿತ್ತು.

ಇದೀಗ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ದೇಚಮ್ಮ ಕಾಳಪ್ಪ ರವರ ಸಲಹೆಯಂತೆ ವಾರ್ಡ್ ನ ಸದಸ್ಯರಾದ ಎಸ್ ಎಚ್ ಮತೀನ್ ಕೇರಳದ ಕೆಂಪು ಕಲ್ಲು ಗಳನ್ನು ಕಾಲದಾರಿಗೆ ಹಾಕಿಸಿ ನೆಡೆದಾಡಲು ಅನುಕೂಲ ಆಗುವಂತೆ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಖಾಸಗಿ ‌ ಸ್ಥಳದವರಲ್ಲಿ ಹಲವು ಬಾರಿ ಪುರಸಭೆಯ ವತಿಯಿಂದ ಸ್ಥಳ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಈವರೆಗೂ ಸ್ಥಳ ಪುರಸಭೆಯಗೆ ಹಸ್ತಾಂತರ ಮಾಡಿರುವುದಿಲ್ಲ. ಮತ್ತೊಮ್ಮೆ ಮನವಿ ಮಾಡುವ ಪ್ರಯತ್ನ ಮಾಡುತ್ತೇವೆ, ಸ್ಥಳ ದೊರಕಿದಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಸದ್ಯದ ಮಟ್ಟಿಗೆ ಕೆಂಪು ಕಲ್ಲು ಬಳಸಿ ಸಾರ್ವಜನಿಕರಿಗೆ ಸಂಚರಿಸಲು ಅನುಕೂಲ ಮಾಡಲಾಗಿದೆ ಎಂದು ತಿಳಿಸಿದಾರೆ.

Comments are closed.