Uttar Pradesh: ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಸಿದ ಮಹಿಳೆ

Uttar pradesh: ಪೆಟ್ರೋಲ್ ಬಂಕ್ ಸಿಬ್ಬಂದಿಯ ಮೇಲೆ ಮಹಿಳೆ ಒಬ್ಬರು ಹಲ್ಲೆ ನಡೆಸಿ ಬಂದೂಕು ತೋರಿಸಿ ಹೆದರಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಿಲ್ ಗ್ರಾಮ್ ನ ಸ್ಯಾಂಡಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಈ ಘಟನೆ ನಡೆದಿದ್ದು, ಕಾರಿಗೆ ಸಿಎನ್ಜಿ ತುಂಬಿಸಲು ಬಂದಿದ್ದ ಕುಟುಂಬವೊಂದು ಪೆಟ್ರೋಲ್ ಬಂಕ್ ಸಿಬ್ಬಂದಿ ರಜನಿಷ್ ಎಂಬುವವರ ಜೊತೆ ಗಲಾಟೆ ಮಾಡಿಕೊಂಡಿದೆ. ಮಾತಿನ ಚಕಮಕಿ ನಡೆಯುತ್ತಿರುವಾಗ ಕುಟುಂಬದ ಮಹಿಳೆಯೊಬ್ಬಳು ಸಿಬ್ಬಂದಿಯ ಎದೆಗೆ ಬಂದು ಗುರುತು ಸಿಗದಂತೆ ಗುಂಡು ಹಾರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ.
ಈ ವಿಡಿಯೋ ಪೆಟ್ರೋಲ್ ಬಕ್ನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Comments are closed.