Iran Israel war: 3 ದಿನಗಳಿಂದ ನಿದ್ದೆ ಮಾಡಿಲ್ಲ – ಪ್ರತಿದಿನ ಸ್ಫೋಟಗಳ ಸದ್ದು ಕೇಳುತ್ತಿದೆ – ಇರಾನ್ನಲ್ಲಿರೋ ಭಾರತೀಯ ವಿದ್ಯಾರ್ಥಿ

Share the Article

Iran Israel war: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ನಡುವೆ, ತೆಹ್ರಾನ್‌ನಲ್ಲಿ ಎಂಬಿಬಿಎಸ್ ಓದುತ್ತಿರುವ ಭಾರತೀಯ ವಿದ್ಯಾರ್ಥಿ ಇಮ್ಮಿಸಾಲ್ ಮೊಹಿದಿನ್, ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದ ಶುಕ್ರವಾರದಿಂದ ತಾನು ನಿದ್ದೆ ಮಾಡಿಲ್ಲ ಎಂದಿದ್ದಾರೆ. ನಾವು ಪ್ರತಿ ರಾತ್ರಿ ಸ್ಪೋಟಗಳ ಸದ್ದು ಮಾತ್ರ ಕೇಳುತ್ತಿದ್ದೇವೆ. ನಾವು ನಮ್ಮ ಅಪಾರ್ಟ್‌ಮೆಂಟ್‌ನ ನೆಲಮಾಳಿಗೆಯಲ್ಲಿ ಸಿಲುಕಿದ್ದೇವೆ ಎಂದು ಜಮ್ಮು ಮತ್ತು ಕಾಶ್ಮೀರದವರಾದ ಇಮಿಸಾಲ್ ಹೇಳಿದ್ದಾರೆ. ವಿಶ್ವವಿದ್ಯಾಲಯವು ತರಗತಿ ಸ್ಥಗಿತಗೊಳಿಸಿದೆ ಎಂದು ಅವರು ANIಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿ ನಿಲಯಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಂದ ಕೆಲವೇ ಕಿಲೋಮೀಟರ್‌ಗಳ ದೂರದಲ್ಲಿ ಸ್ಫೋಟಗಳು ವರದಿಯಾಗುತ್ತಿದ್ದಂತೆ, ಭಯ ಹೆಚ್ಚುತ್ತಿದೆ – ಮತ್ತು ಭಾರತ ಸರ್ಕಾರಕ್ಕೆ ಮನವಿಯೂ ಅಷ್ಟೇ ಹೆಚ್ಚಾಗಿದೆ: ತಡವಾಗುವ ಮೊದಲು ನಮ್ಮನ್ನು ಸ್ಥಳಾಂತರಿಸಿ ಎಂದು ಭಾಋತರೀಯ ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ.

ಟೆಹ್ರಾನ್‌ ಶಾಹಿದ್ ಬೆಹೆಸ್ತಿ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ 22 ವರ್ಷದ ಇಮ್ಮಿಸಾಲ್, ಪ್ರಸ್ತುತ 350 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ತಮ್ಮ ವಿಶ್ವವಿದ್ಯಾಲಯದಲ್ಲಿ ದಾಖಲಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಶಾಹಿದ್ ಬೆಹೆಕ್ತಿ ವಿಶ್ವವಿದ್ಯಾಲಯವು ಬಹಳ ಕಡಿಮೆ ಖರ್ಚಿನಲ್ಲಿ ಸಿಗುವ ಮತ್ತು ಪ್ರತಿಷ್ಠಿತ MBBS ಕಾಲೇಜ್. ಹಾಗಾಗಿ ಹೆಚ್ಚಾಗಿ ಭಾರತೀಯ ವಿದ್ಯಾರ್ಥಿಗಳನ್ನು ಇದು ಆಕರ್ಷಿಸುತ್ತದೆ.

Comments are closed.