Home Crime Bangalore: ಮಾಟ-ಮಂತ್ರದ ಹೆಸರಿನಲ್ಲಿ ಬೆತ್ತಲೆ ವೀಡಿಯೋ ಮಾಡಿದ ಅರ್ಚಕ: ಬ್ಲ್ಯಾಕ್‌ಮೇಲ್‌, ಕಾಮುಕ ಅರೆಸ್ಟ್‌

Bangalore: ಮಾಟ-ಮಂತ್ರದ ಹೆಸರಿನಲ್ಲಿ ಬೆತ್ತಲೆ ವೀಡಿಯೋ ಮಾಡಿದ ಅರ್ಚಕ: ಬ್ಲ್ಯಾಕ್‌ಮೇಲ್‌, ಕಾಮುಕ ಅರೆಸ್ಟ್‌

Hindu neighbor gifts plot of land

Hindu neighbour gifts land to Muslim journalist

Bangalore: ಮಾಟ-ಮಂತ್ರ ಮಾಡಿ ಪೂಜೆಯ ಹೆಸರಲ್ಲಿ ಮಹಿಳೆಯೊಬ್ಬರ ಬೆತ್ತಲೆ ವೀಡಿಯೋ ಮಾಡಿ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಅರ್ಚಕನೊಬ್ಬನನ್ನು ಬೆಂಗಳೂರಿನ ಪೊಲೀಸರು ಬಂಧನ ಮಾಡಿದ್ದಾರೆ.

ಕೇರಳ ಮೂಲದ ಅರ್ಚಕ ಅರುಣ್‌ ಬಂಧಿತ ಆರೋಪಿ. ಮುಖ್ಯ ಅರ್ಚಕ ಉನ್ನಿ ದಾಮೋದರನ್‌ ಪರಾರಿಯಾಗಿದ್ದು, ಬೆಳ್ಳಂದೂರು ಪೊಲೀಸರು ಆರೋಪಿ ಅರ್ಚಕನನ್ನು ಬಂಧನ ಮಾಡಿದ್ದಾರೆ.

ಘಟನೆ ವಿವರ: ನಮ್ಮ ಕುಟುಂಬಕ್ಕೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಕೇರಳದ ಪೆರಿಂಗೊಟ್ಟುಕರ ದೇವಾಲಯಕ್ಕೆ ಮಹಿಳೆ ಹೋಗಿದ್ದು, 24 ಸಾವಿರ ಹಣ ಕಟ್ಟಿದರೆ ಪೂಜೆ ಮಾಡುವುದಾಗಿ ಅರ್ಚ ಅರುಣ್‌ ಹೇಳಿದ್ದು, ಮಹಿಳೆಯ ಫೋನ್‌ ನಂಬರ್‌ ಪಡೆದು ಸ್ವಲ್ಪ ದಿನ ಬಿಟ್ಟು ಬರುವಂತೆ ಹೇಳಿದ್ದ.

ಅನಂತರ ತಡರಾತ್ರಿ ಮಹಿಳೆಯ ವಾಟ್ಸಪ್‌ ನಂಬರ್‌ಗೆ ಅರ್ಚಕ ಬೆತ್ತಲಾಗಿ ಕರೆ ಮಾಡಿದ್ದು, ಮಾಟಮಂತ್ರ ಹೋಗಬೇಕು ಎಂದರೆ ನೀನೂ ಬೆತ್ತಲಾಗಬೇಕೆಂದು ಅರ್ಚಕ ಮಹಿಳೆಗೆ ಹೇಳಿದ್ದ. ಇದಕ್ಕೆ ಮಹಿಳೆ ನಿರಾಕರಿಸಿದ್ದು, ನೀನು ಒಪ್ಪದಿದ್ದರೆ ನಿನ್ನ ಮಕ್ಕಳನ್ನು ಸಾಯಿಸುವ ಹಾಗೆ ಪೂಜೆ ಮಾಡುತ್ತೇವೆ ಎಂದು ಅರ್ಚಕ ಅರುಣ್‌ ಬೆದರಿಕೆ ಹಾಕಿದ್ದಾನೆ. ನಂತರ ಮಹಿಳೆ ಹೆದರಿ, ಆರೋಪಿ ಹೇಳಿದ ರೀತಿಯಲ್ಲಿ ವಿಡಿಯೋಕಾಲ್‌ನಲ್ಲಿ ಬೆತ್ತಲಾಗಿದ್ದಾಳೆ.

ಅನಂತರ ಅರುಣ್‌ ಅಶ್ಲೀಲ ವೀಡಿಯೋ ಇಟ್ಟು, ಮಹಿಳೆಗೆ ಕಿರುಕುಳ ನೀಡಿದ್ದಾನೆ. ಅಲ್ಲದೇ ಕೇರಳಕ್ಕೆ ಬರಲು ಒತ್ತಾಯ ಮಾಡಿದ್ದಾನೆ. ಅರ್ಚಕ ಅರುಣ್‌ ಒತ್ತಾಯಕ್ಕೆ ಹೋಗಿದ್ದ ಮಹಿಳೆಗೆ ಕೇರಳದಲ್ಲಿ ಕಿರುಕುಳ ನೀಡಿದ್ದಾನೆ. ಅಲ್ಲದೇ ಕಾರಿನಲ್ಲಿ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೆ.

ಮಹಿಳೆ ಇದರಿಂದ ನೊಂದಿದ್ದು, ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ. ಅರ್ಚಕ ಅರುಣ್‌ನನ್ನು ಪೊಲೀಸರು ಬಂಧನ ಮಾಡಿ ವಿಚಾರಣೆ ಮಾಡುತ್ತಿದ್ದಾರೆ.