ಇಲ್ಲಿ ಸಿಗುತ್ತೆ ಬ್ರಾ ಬೋಂಡಾ, ಇನ್ನರ್ ವೇರ್ ಪಕೋಡಾ! ತಿನ್ನಲು ಮುಗಿಬಿದ್ದ ಹೆಂಗಸ್ರು: ಏನ್ ಗುರೂ, ಈ ಹೆಂಗಸರಿಗೆ ಏನಾಗಿದೆ ?

Share the Article

New delhi : ಜನರು ಸಕತ್ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಹೆಂಗಸ್ರು ಮುಗಿ ಬಿದ್ದಿದ್ದಾರೆ. ಯಾಕೆಂದ್ರೆ ಮಾರ್ಕೆಟ್’ಗೆ ಹೊಸ ತಿಂಡಿ ಬಂದಿದೆ. ಇಲ್ಲಿ ಸಿಗುತ್ತೆ ಬ್ರಾ ಬೋಂಡಾ, ಇನ್ನರ್ ವೇರ್ ಪಕೋಡಾ!!

https://www.instagram.com/reel/DKdV_C_M7nV/?igsh=ZjFkYzMzMDQzZg==

ಈ ವಿಡಿಯೋದಲ್ಲಿ, ಇನ್ನರ್ ವೇರ್ ಅನ್ನು ಎಣ್ಣೆಯಲ್ಲಿ ಅದ್ದಿ ಕರಿದು ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿರುವುದು ಕಂಡು ಬಂದಿದೆ. ಚಡ್ಡಿ ಮತ್ತು ಬ್ರಾ ಆಕಾರದಲ್ಲಿ ತಯಾರಿಸಲಾದ ಈ ವಿಚಿತ್ರ ಖಾದ್ಯವನ್ನು ಕೊಳ್ಳಲು ಜನ ಕೂಗಿ ಬೀಳುತ್ತಿದ್ದಾರೆ ಎನ್ನುವ ಸೂಚಕವಾಗಿ ಬ್ರಾ ಬೋಂಡಾ ತಿನ್ನಲು ಜನರು ಕ್ಯೂ ನಿಲ್ಲುತ್ತಿದ್ದಾರೆ. ಈ ವಿಶಿಷ್ಟ ಪಕೋಡಾವನ್ನು ಖರೀದಿಸಲು ಅಂಗಡಿಯಲ್ಲಿ ದೊಡ್ಡ ಜನಸಂದಣಿಯೇ ಇದೆ. ವಿಶೇಷವಾಗಿ ಮಹಿಳೆಯರು ಈ ಇನ್ನರ್ ವೇರ್ ತಿಂಡಿಯ ರುಚಿಗೆ ಮಾರು ಹೋಗಿದ್ದಾರೆ ಎನ್ನಲಾಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ಈ ವಿಡಿಯೋದಲ್ಲಿ, ರಸ್ತೆ ಬದಿಯ ಅಂಗಡಿಯೊಂದರಲ್ಲಿ ಒಬ್ಬ ವ್ಯಕ್ತಿ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಬ್ರಾ ಆಕಾರದ ಪಕೋಡಗಳನ್ನು ಫ್ರೈ ಮಾಡುತ್ತಿರುವುದನ್ನು ಕಾಣಬಹುದು. ಕಡಲೆ ಮತ್ತಿತರ ಹಿಟ್ಟುಗಳ ಮಿಶ್ರಣದಿಂದ ಅದನ್ನು ತಯಾರಿಸಲಾಗುತ್ತಿದ್ದು ಆತ ನಿಜವಾಗಿಯೂ ಬ್ರೇಸಿಯರ್ ತರಹವೇ ಕಾಣುವ ತಿಂಡಿಯನ್ನು ತಯಾರಿಸುತ್ತಿದ್ದಾನೆ.

ವಿಡಿಯೋದಲ್ಲಿ, ವಿಶೇಷವಾಗಿ ಮಹಿಳೆಯರು ಈ ಪಕೋಡಗಳನ್ನು ಖರೀದಿಸಿ ಉತ್ಸಾಹದಿಂದ ತಿನ್ನುವುದನ್ನು ಕಾಣಬಹುದು. ಅಂಗಡಿಯ ಸುತ್ತಲೂ ಜನಸಂದಣಿ ಇದೆ. ಜನರು ಈ ವಿಶಿಷ್ಟ ಖಾದ್ಯವನ್ನು ನೋಡಲು, ಅದರ ರುಚಿ ಸವಿಯಲು ಉತ್ಸುಕರಾಗಿದ್ದಾರೆ. ವಿಡಿಯೋದಲ್ಲಿರುವ ಸ್ಥಳ ಎಲ್ಲಿಯದು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಸ್ಪಷ್ಟವಾಗಿ ಈ ಅಂಗಡಿ ವಿದೇಶದಲ್ಲಿಯದು.

ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ ಮತ್ತು ವಿವಿಧ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ. ಇದನ್ನು ಆಹಾರದಲ್ಲಿನ ಸೃಜನಶೀಲತೆ ಎಂದು ಕರೆದಿದ್ದಾರೆ. ಮತ್ತೆ ಕೆಲವು ಬಳಕೆದಾರರು “ಇದು ಅದ್ಭುತವಾದ ಕಲ್ಪನೆ! ರುಚಿ ಚೆನ್ನಾಗಿದೆಯೇ ಇಲ್ಲವೋ ಗೊತ್ತಿಲ್ಲ, ತಿಂಡಿ ಸೆಕ್ಸಿ ಆಗಿದೆ ಎಂದಿದ್ದಾರೆ. ಇನ್ನು ಸಾಕಷ್ಟು ಮಂದಿ “ಇದು ನೋಡಲು ವಿಚಿತ್ರವಾಗಿದೆ. ಆದರೆ ಸ್ವೀಕಾರಾರ್ಹವಲ್ಲ” ಅಂದಿದ್ದಾರೆ. “ಇದು ಯಾವ ರೀತಿಯ ಫುಡ್ ಮಾರಾಯ್ರೆ? ಚಡ್ಡಿ, ಬ್ರೇಸಿಯರ್ ಹೆಸರಿನಲ್ಲಿ ಆಹಾರವನ್ನು ಮಾರಾಟ ಮಾಡುವುದು ನಾಚಿಕೆಗೇಡಿನ ಸಂಗತಿ” ಎಂದೆಲ್ಲಾ ಕಾಮೆಂಟ್ ಬಂದಿದೆ. ಕೆಲವರು ಇದನ್ನು ಮಹಿಳೆಯರ ಅವಮಾನ ಎಂದು ಕರೆದರೆ, ಹಲವರು ಇದನ್ನು ಕೇವಲ ಮಾರ್ಕೆಟಿಂಗ್ ಸ್ಟಂಟ್ ಎಂದು ಕರೆದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಒರ್ವ ಮಹಿಳಾ ಬೋಂಡಾ ಪ್ರಿಯೆ, “ನಾನು ಅದನ್ನು ತಿಂದೆ, ರುಚಿ ಅದ್ಭುತವಾಗಿತ್ತು. ಹೆಸರನ್ನು ನೋಡಿ ನಕ್ಕಿದ್ದೆ, ಆದರೆ ತಿನ್ನಲು ಖುಷಿಯಾಯಿತು. ಈ ತಿಂಡಿಯ ವಿಶಿಷ್ಟ ಹೆಸರು ಮತ್ತು ಆಕಾರ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ” ಎಂದು ಹೇಳಿದ್ದಾರೆ.

ಮಾಹಿತಿಯ ಪ್ರಕಾರ, ಬ್ರಾ ಬೋಂಡಾ ಅಥವಾ ಬ್ರೇಸಿಯರ್ ಪಕೋಡ ಕಂ ಇನ್ನರ್ ವೇರ್ ಖಾದ್ಯ ಹೊಸ ತಿಂಡಿಯಲ್ಲ. ಆದರೆ ಇದು ಕಿಲಾಡಿ ಅಂಗಡಿಯವನ ಮಾರ್ಕೆಟಿಂಗ್ ತಂತ್ರವಾಗಿದೆ. ಆತ ಲಭ್ಯ ಇರುವ ಸಾಂಪ್ರದಾಯಿಕ ಪಕೋಡಕ್ಕೆ ವಿಶಿಷ್ಠ ರೂಪ ನೀಡಿದ್ದು ಆ ಆಕಾರದ ಮೂಲಕ ಗ್ರಾಹಕರನ್ನು ರೋಮಾಂಚನಗೊಳಿಸಿದ್ದಾನೆ. ಕಡಲೆ ಹಿಟ್ಟು, ಮಸಾಲೆಗಳು, ಮತ್ತೆ ಆಲೂಗಡ್ಡೆ ಅಥವಾ ಪನೀರ್ ಬಳಸಿ ತಯಾರಿಸಲಾದ ಪಕೊಡಗಳನ್ನು ಬ್ರೇಸಿಯರ್ ಆಕಾರದಲ್ಲಿಅಚ್ಚು ಹಾಕಿಸಿ ಮಾಡಲಾಗುತ್ತದೆ. ಅಂಗಡಿಯವರು ಇದನ್ನು ಚಟ್ನಿ ಮತ್ತು ಸಾಸ್‌ನೊಂದಿಗೆ ಬಡಿಸುತ್ತಾರೆ, ಇದು ಅದರ ರುಚಿಯನ್ನು ಹೆಚ್ಚಿಸುತ್ತದೆ. ಬೆಲೆ ಸಾಮಾನ್ಯ ಪಕೋಡಗಳಂತೆಯೇ ಇರುತ್ತದೆ, ಇದು ಅದನ್ನು ಹೆಚ್ಚು ಆಕರ್ಷಕವಾಗಿಸುತ್ತದೆ. ರುಚಿ ಸಾಮಾನ್ಯತೆಯಾದರು ಪ್ಯಾಕೇಜಿಂಗ್ ನೋಡಿ ಜನ ಹುಚ್ಚೆದ್ದು ವ್ಯಾಪಾರ ಮಾಡುತ್ತಿದ್ದಾರೆ.

Comments are closed.