Crime: ಮನೆ ಕೆಲಸಕ್ಕೆ ಜನ ಇಟ್ಟುಕೊಳ್ಳುವವರೇ ಎಚ್ಚರ – ಮನೆ ಗುಡಿಸಿ ಗುಂಡಾತರ ಮಾಡ್ಯಾರು

Crime: ಮನೆ ಕೆಲಸ ಮಾಡಲು ಆಗುತ್ತಿಲ್ಲ, ಯಾರಾದರೊಬ್ಬರನ್ನು ಜನ ಇಟ್ಟರೆ ಒಳ್ಳೆಯದು ಎಂದು ಭಾವಿಸಿದ್ರೆ ನಾಲ್ಕು ಸಲ ಯೋಚಿಸಿ. ನಿಮ್ಮ ಮನೆಗೆ ಬರುವ ಕೆಲಸದವರು ಎಂದೂ ನಿಮ್ಮ ಮನೆ ಕೆಲಸವನ್ನೇ ಮಾಡುತ್ತಾರೆ ಎಂಧುಕೊಳ್ಳಬೇಡಿ. ಅದರಲ್ಲೂ ಬೆಂಗಳೂರಿನಂತ ನಗರಗಳಲ್ಲಿ ಮನೆಗೆ ಕೆಲಸದವರನ್ನ ಸೇರಿಸಿಕೊಳ್ಳುವ ಮುನ್ನ ಎಚ್ಚರವಾಗಿರಿ. ಇಲ್ಲೊಬ್ಬ ಹುಷಾರಿಲ್ಲದವರನ್ನು ನೋಡಿಕೊಳಳಲು ಎಂದು ಬಂದ ಕೇರ್ ಟೇಕರ್ ಇಡೀ ಮನೆಯನ್ನು ಗುಡಿಸಿ ಗುಂಡಾತರ ಮಾಡಿದ್ದಾಳೆ.

67 ಲಕ್ಷ ನಗದು ಸೇರಿ 1.57 ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ಈ ಕೇರ್ ಟೇಕರ್ ಪರಾರಿಯಾಗಿದ್ದಾಳೆ. ಚಾಮರಾಜಪೇಟೆ ಪೊಲೀಸರಿಂದ ಕೇರ್ ಟೇಕರ್ ಉಮಾಳನ್ನು ಇದೀಗ ಬಂಧಿಸಲಾಗಿದೆ. ಚಾಮರಾಜಪೇಟೆ ಉದ್ಯಮಿ ಮನೆಯಲ್ಲಿ ಕಳ್ಳತನ ಮಾಡಿದ್ದಳು ಈ ಕಿಲಾಡಿ ಲೇಡಿ. ದೂರುದಾರೆ ರಾಧ ಚಾಮರಾಜಪೇಟೆಯಲ್ಲಿ ಕೂಡು ಕುಟುಂಬದಲ್ಲಿ ವಾಸವಾಗಿದ್ದರು. ನಗರ್ತಪೇಟೆಯಲಿ ಸ್ವಂತ ಸೆಕ್ಯೂರಿಟಿ ಎಜೆನ್ಸಿಯನ್ನು ಇವರು ಹೊಂದಿದ್ದರು. ಸುಮಾರು 8 ತಿಂಗಳಿನಿಂದ ದೂರುದಾರೆ ರಾಧ ಅವರ ಅಕ್ಕ ಸುಜಾತ ವರಿಗೆ ಹುಷಾರಿರಲಿಲ್ಲ. ಬೆಡ್ ರಿಡೆನ್ ಆಗಿದ್ದರಿಂದ ಸುಜಾತ ನೋಡಿಕೊಳ್ಳಲು ಕೇರ್ ಟೇಕರ್ನ್ನು ನೇಮಕ ಮಾಡಿದ್ರು.
ಕಳೆದ 3 ತಿಂಗಳಿಂದ ಏಜೆನ್ಸಿ ಮೂಲಕ ಉಮಾ ಇವರಲ್ಲಿಗೆ ಕೆಲಸಕ್ಕೆ ಬಂದಿದ್ಲು. ಮನೆಯ ಬೀರುವಿನಲ್ಲಿ ಅಕ್ಕ ಸೈಟ್ ಮಾರಾಟ ಮಾಡಿದ್ದ 67 ಲಕ್ಷ ಹಣವನ್ನು ದೂರುದಾರೆ ರಾಧ ಇಟ್ಟಿದ್ದರು. ಜೊತೆಗೆ ಚಿನ್ನ, ಬೆಳ್ಳಿ ಸೇರಿ ಸುಮಾರು 95 ಲಕ್ಷ ಮೌಲ್ಯದ ಆಭರಣ ಇಟ್ಟಿದ್ರು. ಜೂನ್ 9ರಂದು ನೋಡಿದಾಗ ಬೀರುವಿನಲಿದ್ದ ಹಣ ಮತ್ತು ಚಿನ್ನಾಭರಣ ಇರಲಿಲ್ಲ. ಸಿಸಿಟಿವಿ ಕ್ಯಾಮರಾವನ್ನು ಚೆಕ್ ಮಾಡಿದಾಗ ಕೆಲಸದವಳ ಕೃತ್ಯ ಬಯಲಾಗಿದೆ. 4ರಂದು ಬೆಳಿಗ್ಗೆ ಉಮಾ ತನ್ನ ಕೈಯಲಿ ಒಂದು ಬ್ಯಾಗನ್ನು ತೆಗೆದುಕೊಂಡು ಹೊರಗೆ ಹೋಗಿ, ನಂತರ ಸಂಜೆ 6.30ಕ್ಕೆ ವಾಪಸ್ ಮನೆಗೆ ಬಂದಿರುತ್ತಾಳೆ.
ಉಮಾ ಕಳುವಾದ ಬಗ್ಗೆ ಪ್ರಶ್ನೆ ಮಾಡಿದಾಗ ತನಗೆ ಗೊತ್ತಿಲ್ಲ ಎನ್ನುತ್ತಾಳೆ. ಆಗ ಉಮಾ ಮೇಲೆ ಅನುಮಾವಿದೆ ಅಂತ ಚಾಮರಾಜಪೇಟೆ ಪೊಲೀಸರಿಗೆ ದೂರು ನೀಡಿತ್ತಾರೆ. ಪೊಲೀಸರು ಉಮಾಳ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.
ಸದ್ಯ ಉಮಾ ತನ್ನ ಮಗಳ ಮನೆಯಲ್ಲಿ ಇಟ್ಟಿದ್ದ ಸುಮಾರಿ 60 ಲಕ್ಷ ಮೌಲ್ಯದ ಚಿನ್ನಾ- ಹಣ ರಿಕವರಿ ಮಾಡಲಾಗಿದೆ. ಇನ್ನು ಉಳಿದ ಹಣ ಹಾಗೂ ಚಿನ್ನಾ ಎಲ್ಲಿ ಅಂತ ಪೊಲೀಸರಿಂದ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಮಹಾಭಾರತದ ಆಸಕ್ತಿಕರ ಕಥೆ: ಮೀನುಗಾರನ ಮಗಳಿಗೆ ಕಣ್ಣು ಹಾಕಿದ್ದ ಕುರು ಸಾಮ್ರಾಜ್ಯದ ಅಧಿಪತಿ!
Comments are closed.