Mangalore: ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ, ರಿಜಿಸ್ಟರ್ಡ್ ಮ್ಯಾರೇಜ್: ಪತ್ನಿಯಾಗಿ ಸ್ವೀಕರಿಸಲು ನಿರಾಕರಣೆ, ಪಂಜ ಮೂಲದ ವೈದ್ಯರ ವಿರುದ್ಧ ದೂರು ದಾಖಲು

Mangalore: ಪಂಜ ಮೂಲದ ವೈದ್ಯರೊಬ್ಬರ ವಿರುದ್ಧ ಮೈಸೂರಿನ ಯುವತಿ ದೂರು ದಾಖಲಿಸಿರುವ ಘಟನೆ ನಡೆದಿದೆ. ಯುವತಿ ವೈದ್ಯರಿಗೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ನಂತರ ರಿಜಿಸ್ಟರ್ಡ್ ವಿವಾಹವಾಗಿದ್ದು, ಇದೀಗ ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸಿ ವಂಚನೆ ಮಾಡಿದ್ದಾರೆ ಎನ್ನುವ ಆರೋಪದ ಮೇರೆಗೆ ದೂರು ದಾಖಲು ಮಾಡಲಾಗಿದೆ.

ಪಂಜದ ವೆಂಕಟರಮಣ ಭಟ್ಟರ ಪುತ್ರ ಡಾ.ಆದರ್ಶ್ ಅವರು ಫೇಸ್ಬುಕ್ ಮೂಲಕ ತನ್ನನ್ನು ಪರಿಚಯಿಸಿ, ವಿವಾಹದ ಭರವಸೆ ನೀಡಿ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿ, ರಿಜಿಸ್ಟರ್ಡ್ ವಿವಾಹವಾಗಿದ್ದರು. ಆದರೆ ಇದೀಗ ಇದಕ್ಕೆ ತಮ್ಮ ತಂದೆ ತಾಯಿಯ ವಿರೋಧವಿದೆ ಎನ್ನುವ ಕಾರಣವನ್ನು ನೀಡಿ ನನ್ನನ್ನು ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸಿ ವಂಚನೆ ಮಾಡುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾರೆ.
ಡಾ.ಆದರ್ಶ್, ಇವರ ತಂದೆ ವೆಂಕಟರಮಣ ಭಟ್, ತಾಯಿ ಶಶಿಕಲಾ, ಸಹೋದರರಾದ ಆದಿತ್ಯ ಭಟ್, ರಜಿತ್ ಭಟ್ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ.
ಈ ಪ್ರಕರಣ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ತನಿಖೆಗಾಗಿ ಸುಬ್ರಹ್ಮಣ್ಯ ಠಾಣೆಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಹೈಕೋರ್ಟ್ ಆದೇಶದ ಮೇರೆಗೆ ಈ ಪ್ರಕರಣವನ್ನು ಮೈಸೂರು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಡಾ.ಆದರ್ಶ್ ಹಾಗೂ ಅವರ ಕುಟುಂಬ ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಕಾನೂನಾತ್ಮಕ ಪರಿಹಾರ ದೊರೆತಿಲ್ಲ ಎಂದು ವರದಿಯಾಗಿದೆ.
Comments are closed.