Kadaba: ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ: ಬೈಕ್, ಕಾರು, ನಗದು ಸಹಿತ ಮೂವರು ವಶಕ್ಕೆ

Kadaba: ಕಡಬ: ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ನೇರಂಕಿ ಗ್ರಾಮದ ನೇರಂಕಿ ಎಂಬಲ್ಲಿನ ತೋಟವೊಂದರಲ್ಲಿ ಅಕ್ರಮವಾಗಿ ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದ ಮಾಹಿತಿಯ ಮೇರೆಗೆ ಕಡಬ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅಭಿನಂದನ್‌ರವರು ಠಾಣಾ ಸಿಬ್ಬಂದಿಗಳ ಜೊತೆ ದಾಳಿ ಮಾಡಿರುವ ಕುರಿತು ವರದಿಯಾಗಿದೆ.

ಈ ಘಟನೆಯಲ್ಲಿ ಎಂಟು ಜನರು ಪರಾರಿಯಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ. ಕಡಬ ನಿವಾಸಿಗಳಾದ ರಾಧಾಕೃಷ್ಣ (52), ಮೋಹನ್ ದಾಸ್ (48), ವೆಂಕಟರಮಣ (30) ಎಂದು ಗುರುತಿಸಲಾಗಿದೆ.
ಸ್ಥಳದಲ್ಲಿ ಆರು ಬೈಕು, ಎರಡು ಕಾರು, ನಾಲ್ಕು ಕೋಳಿ, ಕೋಳಿ ಅಂಕಕ್ಕೆ ಬಳಸಲಾಗಿದ್ದ ಕತ್ತಿ, ನಗದು ಹಣ 3560 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.