Indoor Plants: ಈ ಗಿಡಗಳಿಗೆ ಬೆಳಕೇ ಬೇಕಿಲ್ಲ: ಮನೆಯೊಳಗಿದ್ದರೆ ನೀವು ಖುಷಿಯಾಗಿರ್ತೀರಿ

Share the Article

Indoor Plants: ಮನೆಯನ್ನು ಸುಂದರವಾಗಿಡುವ ಜೊತೆಗೆ ಒಂದಷ್ಟು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಲು ಸುಲಭ ವಿಧಾನವೆಂದರೆ ಮನೆಯೊಳಗೆ ಸಸ್ಯಗಳನ್ನು ಬೆಳೆಸುವುದು. ಹೆಚ್ಚಿನ ನಿರ್ವಹಣೆ ಬೇಕಿಲ್ಲದೆ ಕೆಲವೊಂದು ಗಿಡಗಳನ್ನು ಮನೆಯೊಳಗೆ ಬೆಳೆಸಬಹುದು. ಅವುಗಳೆಂದರೆ:

:ಚೈನೀಸ್ ಎವರ್‌ಗ್ರೀನ್ (ಅಗ್ಲೋನೆಮಾ): ಇದು ಕಡಿಮೆ ಬೆಳಕಿನಲ್ಲಿ ಬೆಳೆಯುವ ಗುಣವನ್ನು ಹೊಂದಿದ್ದು,ಇದಕ್ಕೆ ಕ್ಲೋರಿನ್ ಒಳಗೊಂಡ ನೀರನ್ನು ಬಳಸಿದರೆ ಸಸ್ಯ ಒಣಗಿ ಹೋಗುವ ಸಾಧ್ಯತೆ ಇರುತ್ತದೆ. ಬೆಚ್ಚಗಿನ ತಾಪಮಾನದಲ್ಲು ಇದನ್ನು ಇರಿಸಬಹುದಾಗಿದೆ.

:ಪೊಥೋಸ್: ಸೂರ್ಯನ ಬೆಳಕು ಇಲ್ಲದೆಯೂ ಇದು ಸುಲಭವಾಗಿ ಬೆಳೆಯುತ್ತದೆ. ಮಣ್ಣನ್ನು ತೇವಾಂಶವಾಗಿಟ್ಟು, ಅತಿಯಾಗಿ ನೀರು ಹಾಕದೇ, ಒಳಾಂಗಣದಲ್ಲಿ ಕುಂಡ ಅಥವಾ ಹ್ಯಾಂಗಿಂಗ್ ಬುಟ್ಟಿಗಳಲ್ಲಿ ಇದನ್ನು ಬೆಳೆಸಬಹುದು.

:ಸಿಂಗೋನಿಯಂ: ಕತ್ತರಿಸುವ ಮೂಲಕ ಇದನ್ನು ಸುಲಭವಾಗಿ ನೆಡಬಹುದು. ಮಣ್ಣು ಅಥವಾ ನೀರಿನಲ್ಲಿ ಬೆಳೆಸಬಹುದು. ಚಿಕ್ಕ ಸಸ್ಯವನ್ನು ಬಾಟಲ್‌ಗಳಲ್ಲಿ ಅಥವಾ ಕುಂಡಗಳಲ್ಲಿ ನೆಡಲು ಸಾಧ್ಯವಿದೆ ಹಾಗೂ ತೇವಾಂಶ ಮತ್ತು ಮಧ್ಯಮ ಬೆಳಕು ಇದಕ್ಕೆ ಸೂಕ್ತ.

:ಫಿಲೋಡೆಂಡ್ರಾನ್: ಕುಂಡದಲ್ಲಿ ಸಸ್ಯದ ಪಕ್ಕದಲ್ಲಿ ಮರದ ಕೋಲು ಅಥವಾ ಬೆಂಬಲವನ್ನು ಒದಗಿಸಿ, ಇದರಿಂದ ಸರಿಯಾಗಿ ಬೆಳೆಯುತ್ತದೆ. ಕಡಿಮೆ ಬೆಳಕು ಮತ್ತು ಮಧ್ಯಮ ತೇವಾಂಶವನ್ನು ಕಾಪಾಡಿಕೊಳ್ಳುತ್ತಾ ನೀರನ್ನು ಮಿತವಾಗಿ ಹಾಕಬೇಕು.

Comments are closed.