Thug Life: ಕನ್ನಡದ ಕುರಿತು ವಿವಾದಾತ್ಮಕ ಹೇಳಿಕೆ – ಕಮಲ್ ಹಾಸನ್ ‘ ಥಗ್ ಲೈಫ್’ ಚಿತ್ರಕ್ಕೆ ಆದ ನಷ್ಟವೆಷ್ಟು?

Share the Article

Thug Life: ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬೆನ್ನಲ್ಲೇ ಕರ್ನಾಟಕದಾದ್ಯಂತ ಕಮಲ್ ಹಾಸನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಗಿತ್ತು. ಆದರೆ ಕಮಲ್ ಹಾಸನ್ ಮಾತ್ರ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನ ತೋರಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಅವರ ‘ಥಗ್ ಲೈಫ್’ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಹೀಗಾಗಿ ಕರ್ನಾಟಕ ಬಿಟ್ಟು ಉಳಿದೆಡೆ ಈ ಚಿತ್ರ ರಿಲೀಸ್ ಆಗಿದೆ. ಜೊತೆಗೆ ಬಾರಿ ನಷ್ಟವನ್ನು ಕೂಡ ಅನುಭವಿಸಿದೆ.

ಹೌದು ಕಮಲ್ ಹಾಸನ್ ಅವರು ತಮ್ಮ ಹಠದಿಂದಾಗಿ ‘ಥಗ್ ಲೈಫ್’ ಚಿತ್ರಕ್ಕೆ ಬರಬೇಕಾದ ಭಾರಿ ಲಾಭವನ್ನು ಕೈಯಾರೆ ಕಳೆದುಕೊಂಡಿದ್ದಾರೆ. ಕನ್ನಡದ ಹುಟ್ಟಿನ ಕುರಿತಾಗಿ ಹೇಳಿದ ಆ ಒಂದು ತಪ್ಪು ಹೇಳಿಕೆಯೇ ಅವರು ಅಪಾರ ಅಭಿಮಾನಿಗಳನ್ನು ಕಳೆದುಕೊಳ್ಳುವಂತೆ ಮಾಡಿದೆ. ಜೊತೆಗೆ ಇದರ ಫಲವೇ ಕಮಲ್ ಹಾಸನ್ ಚಿತ್ರವೀಗ ಬಾಕ್ಸ್ ಆಫೀಸ್‌ನಲ್ಲಿ (box office collection) ಸೋಲುವ ಭೀತಿಯನ್ನು ಎದುರಿಸುತ್ತಿದೆ. ಕನ್ನಡಿಗರೊಂದಿಗೆ ವಿವಾದದಿಂದಾಗಿ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯಾಗದೇ ಇರುವುದು ಕೂಡ ಚಿತ್ರತಂಡಕ್ಕೆ ಬಹುದೊಡ್ಡ ನಷ್ಟವನ್ನು ಉಂಟು ಮಾಡಲಿದೆ.

ಇನ್ನು ಕರ್ನಾಟಕದಲ್ಲಿ ‘ಥಗ್ ಲೈಫ್‌’ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ನಡೆದಿತ್ತು. ಈ ಸಿನಿಮಾವನ್ನು ಕರ್ನಾಟಕದ ವಿತರಕ ವೆಂಕಟೇಶ್ ಎಂಬವರು ಸುಮಾರು 8.10 ಕೋಟಿ ರೂಪಾಯಿಗೆ ಖರೀದಿ ಮಾಡಿ ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಯೋಜನೆ ಹಾಕಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ ವಿವಾದದಿಂದಾಗಿ ಸಿನಿಮಾ ಬಿಡುಗಡೆಯಾಗಲಿಲ್ಲ.

ಸದ್ಯ ಈ ಚಿತ್ರ ಬಿಡುಗಡೆ ವಿಷಯ ಹೈಕೋರ್ಟ್‌ನಲ್ಲಿದೆ. ಕಮಲ್ ವಿವಾದ ಮಾಡಿಕೊಳ್ಳದೇ ಇರುತ್ತಿದ್ದರೆ ಕರ್ನಾಟಕದಲ್ಲಿ ಚಿತ್ರವು ಮೊದಲ ದಿನ ಕನಿಷ್ಠ ಸುಲಭವಾಗಿ 4 ರಿಂದ 5 ಕೋಟಿ ರೂ . ಗಳಿಕೆ ಮಾಡುತ್ತಿತ್ತು. ಬಳಿಕ ಎರಡನೇ ದಿನ ಕನಿಷ್ಠ 1.5 ರಿಂದ 2 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಚಿತ್ರ ದೊಡ್ಡ ಮಟ್ಟದಲ್ಲಿ ಸೋಲು ಕಾಣುತ್ತಿರಲಿಲ್ಲ. ಒಂದು ವೇಳೆ ಇನ್ನು ಒಂದು ವಾರ ಬಿಟ್ಟು ಕರ್ನಾಟಕದಲ್ಲಿ ಈ ಚಿತ್ರ ಬಿಡುಗಡೆಯಾದರೂ ಕಲೆಕ್ಷನ್ ಕಷ್ಟ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ.

Comments are closed.