Murder: ಅಕ್ರಮ ಸಂಬಂಧ, ಪತ್ನಿಯ ರುಂಡ ಕಡಿದು, ಬೈಕ್‌ನಲ್ಲಿ ಪೊಲೀಸ್ ಠಾಣೆಗೆ ಬಂದ ಪತಿ

Murder: ಪತ್ನಿಯ ಅಕ್ರಮ ಸಂಬಂಧದಿಂದ ರೋಸಿ ಹೋಗಿದ್ದ ಪತಿ ಆಕೆಯ ರುಂಡವನ್ನು ಕಡಿದು ಕೈಯಲ್ಲಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಪತ್ನಿ ರುಂಡದ ಜೊತೆ ಪೊಲೀಸ್ ಠಾಣೆಗೆ ಬಂದ ವ್ಯಕ್ತಿಯನ್ನು ಕಂಡ ಪೊಲೀಸರು ಕೂಡಲೇ ಆತನನ್ನು ಬಂಧನ ಮಾಡಿದ್ದಾರೆ.

ಹೆನ್ನಾಗರ ನಿವಾಸಿ ಶಂಕರ್ (28) ಆರೋಪಿ.
ಪತ್ನಿಯ ರುಂಡವನ್ನು ಬೈಕ್‌ನಲ್ಲಿ ತೆಗೆದುಕೊಂಡು ಸೂರ್ಯನಗರ ಠಾಣೆಗೆ ಬಂದು ಶರಣಾಗಿದ್ದಾನೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹಾಗೂ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕೆಲವು ವರ್ಷಗಳ ಹಿಂದೆ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದು, ಹೀಲಲಿಗೆ ಗ್ರಾಮದ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಈ ತಿಂಗಳ 3 ನೇ ತಾರೀಕಿನಂದು ಕೆಲಸಕ್ಕೆ ಹೋಗುವುದಾಗಿ ಪತ್ನಿಗೆ ತಿಳಿಸಿ, ನಾಳೆ ಬರುವುದಾಗಿ ಹೊರ ಹೋಗಿದ್ದ. ಆದರೆ ಕೆಲಸ ಬೇಗ ಮುಗಿದ ಕಾರಣ ಪತ್ನಿ ಒಬ್ಬಳೇ ಇದ್ದಾಳೆಂದು ತಡರಾತ್ರಿಯೇ ಮನೆಗೆ ಬಂದಿದ್ದ. ಈ ವೇಳೆ ಪತ್ನಿ ಮಾನಸ ಪ್ರಿಯಕರನ ಜೊತೆ ಚಕ್ಕಂದವಾಡುವುದನ್ನು ಕಂಡಿದ್ದಾನೆ.
ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ಹಿಡಿದು, ಹಲ್ಲೆ ಮಾಡಿದ್ದಾನೆ. ನೀನು ನನಗೆ ಬೇಡ ಎಂದು ಪ್ರಿಯಕರನ ಜೊತೆಯಲ್ಲೇ ಮಾನಸಳನ್ನು ಕಳಿಸಿದ್ದ.
ಆದರೆ ಪತ್ನಿ ಪದೇ ಪದೇ ಮನೆಗೆ ಬಂದು ಪತಿ ಶಂಕರ್ ಗೆ ಟಾರ್ಚರ್ ನೀಡುತ್ತಿದ್ದಳು. ಶುಕ್ರವಾರ ರಾತ್ರಿ ಕೂಡಾ ಮನೆಗೆ ಬಂದು ಗಲಾಟೆ ಮಾಡಿದ್ದು, ಇದರಿಂದ ಸಿಟ್ಟುಗೊಂಡ ಶಂಕರ್ ಆಕೆಯನ್ನು ಕೊಂದಿದ್ದಾನೆ. ನಂತರ ಪೊಲೀಸ್ ಠಾಣೆಗೆ ಆಕೆಯ ರುಂಡದ ಜೊತೆ ಬಂದಿದ್ದಾನೆ.
Comments are closed.