Gang Rape: ಮೆಟ್ರೋ ಕೆಳಗೆ ಮಲಗಿದ್ದ 3 ವರ್ಷದ ಮಗು ಮೇಲೆ ಗ್ಯಾಂಗ್‌ ರೇಪ್‌ ಪ್ರಕರಣ: ಆರೋಪಿ ಎನ್‌ಕೌಂಟರ್‌ಗೆ ಸಾವು

Share the Article

Gang Rape: ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಮೆಟ್ರೋ ಸೇತುವೆಯಿಂದ ಕೆಳಗೆ ಬಿಸಾಕಿ ಹೋಗಿದ್ದ ಆರೋಪಿಯನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.

ದೀಪಕ್‌ ವರ್ಮಾ (26) ಎನ್‌ಕೌಂಟರ್‌ಗೆ ಬಲಿಯಾದ ವ್ಯಕ್ತಿ. ಈತನ ಕುರಿತು ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಆಲಂಬಾಗ್‌ ಪೊಲೀಸರು ಘೋಷಣೆ ಮಾಡಿದ್ದರು. ಇಂದು ಬೆಳಿಗ್ಗೆ ಆಲಂಬಾಗ್‌ ಪ್ರದೇಶದಲ್ಲಿ ಆರೋಪಿ ಎನ್‌ಕೌಂಟರ್‌ಗೆ ಬಲಿಯಾಗಿರುವುದಾಗಿ ಕೇಂದ್ರ ವಲಯ ಉಪಪೊಲೀಸ್‌ ಆಯುಕ್ತ ಆಶಿಶ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಮೂರು ವರ್ಷದ ಮಗುವೊಂದು ಮೆಟ್ರೋ ನಿಲ್ದಾಣದ ಬಳಿ ತನ್ನ ಪೋಷಕರ ಜೊತೆ ವಾಸವಾಗಿದ್ದು, ಮಲಗಿದ್ದ ಮಗುವನ್ನು ಎತ್ತಾಕ್ಕೊಂಡು ಹೋದ ಆರೋಪಿ ಅತ್ಯಾಚಾರ ಮಾಡಿ ಆಲಂಬಾಗ್‌ ಮೆಟ್ರೋ ಸೇತುವೆ ಬಳಿ ಎಸೆದು ಹೋಗಿದ್ದ. ಪೋಷಕರು ಎಚ್ಚರಗೊಂಡು ಮಗು ಕಾಣಿಸದೇ ಇದ್ದು, ಹುಡುಕಾಟ ಮಾಡಿದಾಗ ಮೆಟ್ರೋ ಸೇತುವೆ ಬಳಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

Comments are closed.