Bengaluru: ಕಾಲ್ತುಳಿತ ದುರಂತ:ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ: ಜೂನ್ 10 ವಿಚಾರಣೆ ನಿಗದಿಪಡಿಸಿದ ಹೈ ಕೋರ್ಟ್

Bengaluru: ನಿನ್ನೆ ದಿನ RCB ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದಂತಹ 11 ಜನರ ಸಾವಿನ ಕುರಿತಾಗಿ ಹೈ ಕೋರ್ಟ್ ಸ್ವತಃ ದೂರು ದಾಖಲಿಸಿಕೊಂಡಿದೆ.

ಇಂದು ವಾದ ವಿವಾದ ಆಲಿಸಿದ ಕೋರ್ಟ್ ಜೂನ್ 10 ರೊಳಗಾಗಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದು, ಹೈ ಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ. ಈ ಕುರಿತಾಗಿ ಸಿ ಎಂ ಸಿದ್ಧರಾಮಯ್ಯ ಗಾಯಗೊಂಡಿರುವ ಎಲ್ಲರ ಚಿಕಿತ್ಸೆ ಖರ್ಚನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಹೇಳಿದ್ದು, ಈ ಕುರಿತಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸುರಕ್ಷಾ ಟ್ರಸ್ಟ್ ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Comments are closed.