Operation Sindhoor: ಬಹಿರಂಗಪಡಿಸಿದ್ದಕ್ಕಿಂತ 8 ಹೆಚ್ಚುವರಿ ಜಾಗಗಳ ಮೇಲೆ ಭಾರತ ದಾಳಿ: ಬೆದರಿ ಬೆಂಡಾಗಿದ್ದ ಪಾಕಿಸ್ತಾನ

Operation Sindhoor: ಭಾರತದ ಸೇನಾ ಪಡೆಗಳು ಬಹಿರಂಗಪಡಿಸಿದ್ದಕ್ಕಿಂತ ಹೆಚ್ಚಿನ ಜಾಗಗಳ ಮೇಲೆ ಆಪರೇಷನ್ ಸಿಂಧೂರ್‌ನಲ್ಲಿ ಭಾರತ ದಾಳಿ ಮಾಡಿದೆ ಎಂದು ಪಾಕಿಸ್ತಾನದ ದಾಖಲೆಗಳು ತೋರಿಸುತ್ತವೆ ಎಂದು NDTV ವರದಿ ಮಾಡಿದೆ. ಪಾಕಿಸ್ತಾನದ ಪೇಶಾವರ್, ಝಂಗ್, ಬಹವಾಲ್‌ನಗರ, ಅಟಾಕ್, ಚೋರ್ ಸೇರಿದಂತೆ ಹೆಚ್ಚುವರಿ 8 ಜಾಗಗಳ ಮೇಲೆ ದಾಳಿಯಾಗಿದೆ ಎಂದು ವರದಿಯಾಗಿದೆ. ಭಾರತ ಹೇಳಿದ್ದಕ್ಕಿಂತ ಹೆಚ್ಚು ತೀವ್ರವಾದ ದಾಳಿ ನಡೆದಿದೆ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಏಕೆ ಪ್ರಯತ್ನಿಸಿತು ಎಂಬುದನ್ನು ಇದು ಹೇಳುತ್ತದೆ ಎಂದು ವರದಿ ಹೇಳಿದೆ.

ಭಾರತೀಯ ಅಧಿಕಾರಿಗಳು ಪ್ರಾರಂಭದಲ್ಲಿ ಬಹಿರಂಗಪಡಿಸಿದ 20 ಸ್ಥಳಗಳನ್ನು ಅಲ್ಲದೆ 28 ಸ್ಥಳಗಳನ್ನು ಗುರಿಯಾಗಿಸಿಕೊಂಡಿದೆ ಎಂದು ದಾಖಲೆಯಲ್ಲಿ ಬಹಿರಂಗಪಡಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ, ಭಾರತೀಯ ವಾಯುಪಡೆ ಮತ್ತು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಹಂಚಿಕೊಂಡ ಅಂಕಿಅಂಶಗಳಿಗಿಂತ ಇದು ಬಹಳ ಜಾಸ್ತಿಯಾಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಅಧಿಕೃತವಾಗಿ ಹೇಳಿದ್ದಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚಿನ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.
Comments are closed.