IPL 2025: 18 ವರ್ಷ ಇಬ್ಬರು ವರ್ಜಿನ್ ಗಳು: ಕಾಂಡೋಮ್ ಕಂಪೆನಿ ಪೋಸ್ಟ್ ಸಕತ್ ವೈರಲ್

IPL 2025: ಇಂದು ಪಂಜಾಬ್ v/s ಬೆಂಗಳೂರು IPL ಪಂದ್ಯಾವಳಿ ನಡೆಯಲಿದ್ದು, ಈಗಾಗಲೇ ಎಲ್ಲರೂ ಉತ್ಸುಕರಾಗಿದ್ದಾರೆ. ಎರಡೂ ತಂಡಗಳು ಇದುವರೆಗೂ ಒಂದು ಬಾರಿಯೂ ಕಪ್ ಗೆದ್ದಿಲ್ಲದ ಕಾರಣ ನೇರ ಹಣಾಹಣಿಯನ್ನು ಎದುರಿಸಲಿವೆ.

ಇನ್ನು ಈ ಕುರಿತಾಗಿ ಡೂರೆಕ್ಸ್ ಕಾಂಡೋಮ್ ಕಂಪೆನಿ ಪೋಸ್ಟ್ ಮಾಡಿದ್ದು, 18 ವರ್ಷ, ಇಬ್ಬರು ವರ್ಜಿನ್ ಗಳು ಇಂದು ರಾತ್ರಿ ಯಾರಿಗೆ ಅದೃಷ್ಟ ಸಿಗುತ್ತದೆ ಎಂದು ಬರೆದುಕೊಂಡಿದೆ. ಇದೀಗ ಈ ಪೋಸ್ಟ್ ಸಕತ್ ವೈರಲ್ ಆಗಿದ್ದು, ಟ್ರೋಫಿ ಗೆಲ್ಲುವುದಕ್ಕೂ ಮೊದಲೇ ಈ ಕಂಪೆನಿ ಜನರನ್ನು ಗೆದ್ದು ಬಿಟ್ಟಿದೆ.
ಚೆನ್ನೈ ಹಾಗೂ ಮುಂಬೈ ಈಗಾಗಲೇ ಟ್ರೋಫಿ ಗೆದ್ದಿದ್ದು, 18 ವರ್ಷಕ್ಕೂ ಮೊದಲೇ ಈ ಎರಡು ತಂಡಗಳು ತಮ್ಮ ಕನ್ಯತ್ವವನ್ನು ಕಳೆದುಕೊಂಡಿವೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
Comments are closed.