Lottery: 30 ಕೋಟಿ ಲಾಟರಿ ಗೆದ್ದು ಗೆಳತಿಗೆ ಗಿಫ್ಟ್ ಕೊಟ್ಟ ಪ್ರೇಮಿ: ಅನಂತರ ಆಕೆ ಮಾಡಿದ್ದೇನು?

Lottery: ಕೆನಡಾದ ವ್ಯಕ್ತಿಯೊಬ್ಬ ತಾನು ಲಾಟರಿಯಲ್ಲಿ ಗೆದ್ದ 30 ಕೋಟಿಯನ್ನು ತನ್ನ ಗೆಳತಿಗೆ ನೀಡಿದ್ದು, ಹಣವನ್ನು ಪಡೆದ ಆಕೆ ಪರಾರಿಯಾಗಿರುವ ಘಟನೆಯೊಂದು ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕ್ಯಾಮ್ಪ್ಬೆಲ್ ಎನ್ನುವಾತ ತಾನು ಲಾಟರಿ ಖರೀದಿಸಲು ತನ್ನ ಬಳಿ ಮಾನ್ಯವಾದ ಗುರುತಿನ ಚೀಟಿ ಇಲ್ಲದ ಕಾರಣ 2024 ರಲ್ಲಿ ತನ್ನ ಗೆಳತಿ ಮೆಕ್ಕೆ ಹೆಸರಿನಲ್ಲಿ ಲಾಟರಿ ಖರೀದಿ ಮಾಡಿರುತ್ತಾನೆ. ಹಾಗೂ ಇವರಿಬ್ಬರು ಒಟ್ಟಿಗೆ ಒಂದೂವರೆ ವರ್ಷ ಡೇಟಿಂಗ್ ಮಾಡಿರುತ್ತಾರೆ.
ಇನ್ನೂ ಬಹುಮಾನದ ಹಣವನ್ನು ತನ್ನ ಬಳಿ ಸ್ವಂತ ಖಾತೆ ಇಲ್ಲದ ಕಾರಣ ತನ್ನ ಗೆಳತಿಯ ಖಾತೆಗೆ ವರ್ಗಾವಣೆ ಮಾಡಿರುತ್ತಾನೆ. ಈ ದಂಪತಿಗಳು ಬಹುಮಾನದ ಚೆಕ್ ಸ್ವೀಕರಿಸುವ ವಿಡಿಯೋ ಕೂಡ ಆನ್ಲೈನ್ ನಲ್ಲಿ ಹಂಚಿಕೊಂಡಿರುತ್ತಾರೆ. ಹಾಗೂ ಆತ ಆ ಚೆಕ್ ಅನ್ನು ಅವಳ ಹುಟ್ಟುಹಬ್ಬ ಕ್ಕೆ ಉಡುಗೊರೆಯಾಗಿ ನೀಡಿದ್ದು, ಆಕೆ ಕೆಲ ದಿನಗಳ ನಂತರ ಆ ಹಣದೊಂದಿಗೆ ಪರಾರಿಯಾಗಿದ್ದಾಳೆ. ಹಾಗೂ ಈ ಕುರಿತಾಗಿ ಆತ ದೂರು ದಾಖಲು ಮಾಡಿರುತ್ತಾನೆ.
Comments are closed.