Mangaluru: ಮಂಗಳೂರು: ಪಶ್ಚಿಮ ಘಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಾರಣ ನಿಷೇಧ

Mangaluru: ಪಶ್ಚಿಮಘಟ್ಟ ಸಹಿತ ಬೆಳ್ತಂಗಡಿ ತಾಲೂಕಿನ ಸುತ್ತಮುತ್ತ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣವಿರುವ ಪರಿಣಾಮ ಪ್ರವಾಸಿ ತಾಣಗಳ ಚಾರಣ ಹಾಗೂ ವೀಕ್ಷಣೆಗೆ ಅರಣ್ಯ ಇಲಾಖೆ ನಿಷೇಧ ಹೇರಿದೆ.

ಬೆಳ್ತಂಗಡಿ ತಾಲೂಕಿನ ಪಶ್ಚಿಮಘಟ್ಟ ಅಂಚಿನಲ್ಲಿರುವ ನರಸಿಂಹಗಢ (ಗಡಾಯಿಕಲ್ಲು), ಕಡಮಗುಂಡಿ, ಬೊಳ್ಳೆ, ಮತ್ತು ಬಂಡಾಜೆ ಜಲಪಾತಗಳಿಗೆ ತೆರಳಲು ಪ್ರವಾಸಿಗರಿಗೆ ಮುಂದಿನ ಆದೇಶದ ವರೆಗೆ ಬೆಳ್ತಂಗಡಿ ವನ್ಯಜೀವಿ ವಿಭಾಗದಿಂದ ಪ್ರವೇಶ ನಿಷೇಧಿಸಲಾಗಿದೆ.
ಮುಂದಿನ ಆದೇಶದವರೆಗೆ ತತ್ಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಮೇ 31ರಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶರ್ಮಿಷ್ಠಾ ಆದೇಶ ಹೊರಡಿಸಿದ್ದಾರೆ.
Comments are closed.