Chikkaballapur: ಚಿಕ್ಕಬಳ್ಳಾಪುರ: ಮೌಲ್ವಿ ತಂದೆಯಿಂದ ಮಸೀದಿ ಕೊಠಡಿಯಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

Share the Article

Chikkaballapur: ಆರು ವರ್ಷ ವಯಸ್ಸಿನ ಬಾಲಕಿ ಮೇಲೆ 55 ವರ್ಷದ ವ್ಯಕ್ತಿ ಅತ್ಯಾಚಾರ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಶಮ್ಸ್‌ ಮಸೀದಿ ಕೊಠಡಿಯಲ್ಲಿ ಅತ್ಯಾಚಾರ ಎಸಗಲಾಗಿದೆ ಎಂದು ಬಾಲಕಿಯ ತಾಯಿ ಆರೋಪ ಮಾಡಿದ್ದಾರೆ. ಮಹಿಳಾ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಮಹಪ್ಯೂಸ್‌ ಎಂಬಾತನೇ ಆರೋಪಿ. ಈತನನ್ನು ಬಂಧನ ಮಾಡಲಾಗಿದೆ. ಈತ ಬೇರೊಂದು ಮಸೀದಿಯಲ್ಲಿ ಮೌಲ್ವಿಯಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯ ತಂದೆ.

ಆರೋಪಿಯ ಮಗ ಬೇರೊಂದು ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದುದರಿಂದ ಮೌಲ್ವಿಯ ಆಶ್ರಯಕ್ಕೆ ಮಸೀದಿಯ ಕೊಠಡಿಯನ್ನು ಜಮಾತ್‌ ನೀಡಿತ್ತು. ಅದೇ ಕೊಠಡಿಯಲ್ಲಿ ಆರೋಪಿ ಬಾಲಕಿಯನ್ನು ರೇಪ್‌ ಮಾಡಿದ್ದಾನೆ. ಚಾಕಲೇಟ್‌ ನೀಡುವ ಆಮಿಷವೊಡ್ಡಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆ ಬೆಳಕಿಗೆ ಬಂದ ಕೂಡಲೇ ಮಸೀದಿಯ ಮೌಲ್ವಿ ಸುಹೇಬ್‌ನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು, ಮೌಲ್ವಿಯ ಆಶ್ರಯಕ್ಕೆಂದು ನೀಡಿದ ಕೊಠಡಿಯನ್ನು ತಂದೆಗೆ ಯಾಕೆ ನೀಡಿದ್ದು ಎಂದು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಸಂತ್ರಸ್ತೆಯ ಬಾಲಕಿ ತಾಯಿ ಆರೋಪಿಗೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.

 

Comments are closed.